ಮಾಹಿತಿಯ ಬಗ್ಗೆ ಹಕ್ಕು
ವಿಜಯಾ ಬ್ಯಾಂಕ್
ವಿಜಯಾ ಬ್ಯಾಂಕ್ ಕುರಿತು ಮಾಹಿತಿ
ಮಾಹಿತಿ ಹಕ್ಕು ಕಾಯಿದೆ 2005ರ ಅನ್ವಯ
ಈ ಕಾಯಿದೆಯ ಅನ್ವಯ, ಪ್ರತಿಯೊಂದು ಸಾರ್ವಜನಿಕ ಸಂಸ್ಥೆಯೂ ತಮ್ಮ ಸಂಸ್ಥೆ ಕುರಿತು ಗ್ರಾಹಕರಿಗೆ ಮಾಹಿತಿಯನ್ನು ಪ್ರಕಟಿಸಬೇಕು. ಅದಕ್ಕೆ ಅನುಗುಣವಾಗಿ, ಈ ಬ್ಯಾಂಕು ಈ ಕೆಳಗಿನ ಮಾಹಿತಿಯನ್ನು ಗ್ರಾಹಕರ ಮಾಹಿತಿಗಾಗಿ ಮತ್ತು ಉಪಯೋಗಕ್ಕಾಗಿ ಸಲ್ಲಿಸುತ್ತಿದೆ.
 
ವಿಷಯದ ಸಂಖ್ಯೆ ವಿಷಯದ ಸಂ ವಿವರಗಳು
4.1 ಬಿ ಸಂಸ್ಥೆಯ ವಿವರಗಳು, ಕಾರ್ಯಗಳು ಮತ್ತು ಕರ್ತವ್ಯಗಳು

ವಿಜಯಾ ಬ್ಯಾಂಕ್ ಒಂದು ರಾಷ್ಟ್ರೀಕೃತ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್. 1931ರಲ್ಲಿ ಆರಂಭವಾದ ಬ್ಯಾಂಕ್ ತನ್ನ ಪ್ಲಾಟಿನಂ ಜುಬಿಲಿಯನ್ನು ಪ್ರಸ್ತುತ ಹಣಕಾಸು ವರ್ಷದಲ್ಲಿ ಆಚರಿಸಿಕೊಳ್ಳುತ್ತಿದೆ. ಈ ಬ್ಯಾಂಕ್ 15.04.1980ರಲ್ಲಿ ಬ್ಯಾಂಕಿಂಗ್ ಕಂಪನಿಗಳ (ಅಕ್ವಿಜಿಶನ್ & ಟ್ರಾನ್ಸ್ ಫರ್ ಆಫ್ ಅಂಡರ್ ಟೇಕಿಂಗ್ಸ್) ಕಾಯಿದೆ,1980 ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ (ನಿರ್ವಹಣೆ ಮತ್ತು ಇತರೆ ಅನುಕೂಲಗಳು) ಯೋಜನೆ 1980ರ ಅಡಿಯಲ್ಲಿ ರಾಷ್ಟ್ರೀಕೃತಗೊಂಡಿತು. ಜೊತೆಗೆ ಈ ಬ್ಯಾಂಕು ಬ್ಯಾಂಕಿಂಗ್ ವಿಧೇಯಕ ಕಾಯಿದೆ 1949ರಿಂದ ನಿರ್ದೇಶಿತವಾಗಿದೆ ಹಾಗು ಆ ಕಾಯಿದೆಯ 6ನೇ ಭಾಗದಲ್ಲಿ ಸಂಪೂರ್ಣವಾಗಿ ವಿವರಿಸಲಾದ ವಿವಿಧ ವ್ಯವಹಾರಗಳಲ್ಲಿ ತೊಡಗಿರುತ್ತದೆ. ಪ್ರಸ್ತುತ ಬ್ಯಾಂಕಿನ ಈಕ್ವಿಟಿಯಲ್ಲಿ ಭಾರತ ಸರ್ಕಾರದ ಷೇರು 53.87% ರಷ್ಟಾಗಿರುತ್ತದೆ. ಈ ಬ್ಯಾಂಕು ಸೂಕ್ತವಾಗಿ ರಚಿತವಾಗಿರುವ ನಿರ್ದೇಶನ ಮಂಡಲಿಯಿಂದ ನಿರ್ವಹಣೆಗೊಳಗಾಗಿದೆ. ನಿರ್ದೇಶನ ಮಂಡಳಿಯ ಈಗಿನ ಸಂಖ್ಯೆ 12. ಅವರಲ್ಲಿ 2 ಜನ ಕಾರ್ಯಕಾರಿ ಹಾಗು 10 ಜನ ಕಾರ್ಯಕಾರಿಯಲ್ಲದ ವಿವಿಧ ಕ್ಷೇತ್ರಗಳಲ್ಲಿ ಪರಿಣತಿಯನ್ನು ಪಡೆದ ನಿರ್ದೇಶಕರು ಇರುತ್ತಾರೆ. ನಿರ್ದೇಶಕ ಮಂಡಲಿಯ ವಿವರಗಳನ್ನು ಕೆಳಗಿನ 1ನೇ ಪಟ್ಟಿಯಲ್ಲಿ ನೀಡಲಾಗಿದೆ

 
1ನೇ ಪಟ್ಟಿ- 20.05.2011ರಂದು ಇದ್ದಂತೆ
ಕ್ರ.ಸಂ. ನಿರ್ದೇಶಕರ ಹೆಸರು ಪದನಾಮ ನಿರ್ದೇಶನದ ಬಗೆ

1

ಶ್ರೀ ಎಚ್.ಎಸ್. ಉಪೇಂದ್ರ ಕಾಮತ್

ಚೇರ್ಮನ್ ಮತ್ತು ನಿರ್ವಹಣಾ ನಿರ್ದೇಶಕರು

ಕಾರ್ಯಕಾರಿ

2

ಶ್ರೀಮತಿ ಶುಭಲಕ್ಷ್ಮಿ ಪನ್ಸೆ

ಕಾರ್ಯಕಾರಿ ನಿರ್ದೇಶಕರು

ಕಾರ್ಯಕಾರಿ

          3

ಶ್ರೀ ವಿ. ಕೆ. ಚೋಪ್ರಾ

ಸರ್ಕಾರಿ ನಾಮಕರಣಿತ ನಿರ್ದೇಶಕರು ಕಾರ್ಯಕಾರಿಯೇತರ

4

ಶ್ರೀಮತಿ ಸುಮಾ ವರ್ಮ

ಆರ್.ಬಿ.ಐ. ನಾಮಕರಣಿತ ನಿರ್ದೇಶಕರು

ಕಾರ್ಯಕಾರಿಯೇತರ

5

ಶ್ರೀ ಸುರೇಶ್ ಕಾಮತ್

ಕಾರ್ಮಿಕ ನಿರ್ದೇಶಕರು 

ಕಾರ್ಯಕಾರಿಯೇತರ

6

ಶ್ರೀಮತಿ ಭಾರತಿ ರಾವ್

ಷೇರುದಾರ ನಿರ್ದೇಶಕರು

ಕಾರ್ಯಕಾರಿಯೇತರ

7

ಶ್ರೀ ನಿಶಾಂಕ್ ಕುಮಾರ್ ಜೈನ್

ಷೇರುದಾರ ನಿರ್ದೇಶಕರು

ಕಾರ್ಯಕಾರಿಯೇತರ

8

ಶ್ರೀ ಪಿ.ವೈದ್ಯನಾಥನ್

ಷೇರುದಾರ  ನಿರ್ದೇಶಕರು

ಕಾರ್ಯಕಾರಿಯೇತರ

9

ಶ್ರೀ ಬಿ.ಇಬ್ರಾಹಿಮ್

ಅಧಿಕಾರಿಯೇತರ ನಿರ್ದೇಶಕರು

ಕಾರ್ಯಕಾರಿಯೇತರ

10

ಶ್ರೀ ಪ್ರಕಾಶ್ ಚಂದ್ರ ನಲ್ವಾಯ

ಅಧಿಕಾರಿಯೇತರ ನಿರ್ದೇಶಕರು

ಕಾರ್ಯಕಾರಿಯೇತರ

 

 

 

 

 

   

 

 
ಸಾಂಸ್ಥಿಕ ರಚನೆ

ಈ ಬ್ಯಾಂಕಿನ ಸಾಂಸ್ಥಿಕ ರಚನೆಯಲ್ಲಿ ಮೂರು ಹಂತಗಳಿವೆ. ಅವುಗಳೆಂದರೆ, ಮುಖ್ಯ ಕಛೇರಿ, ಪ್ರಾಂತೀಯ ಕಛೇರಿಗಳು ಮತ್ತು ಶಾಖೆಗಳು. ಬ್ಯಾಂಕಿನ ಮುಖ್ಯ ಕಛೇರಿಯು ಬೆಂಗಳೂರಿನಲ್ಲಿದೆ. (41/2, ಎಮ್.ಜಿ.ರಸ್ತೆ, ಬೆಂಗಳೂರು-560001, ದೂರವಾಣಿ ಸಂಖ್ಯೆ: 080-25584066,ಫ್ಯಾಕ್ಸ್: 080-25598040, ಇ-ಮೆಯಿಲ್ – vijbank@vsnl.com, ಅಂತರ್ಜಾಲ ತಾಣ: :(www.vijayabank.com). ಹಾಗು ಈ ಬ್ಯಾಂಕು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬರುವ ಶಾಖೆಗಳ ಮೇಲೆ ತಕ್ಷಣದ ಮೇಲ್ವಿಚಾರಣೆಯನ್ನು ಕೈಗೊಳ್ಳಲು 20 ಪ್ರಾಂತೀಯ ಕಛೇರಿಗಳನ್ನೂ ಪ್ರಾರಂಭಿದೆ. ಹಿರಿಯ/ಉನ್ನತ ವ್ಯವಹಾರ ಶ್ರೇಣಿಯಲ್ಲಿರುವ ಅನುಭವಸ್ಥ ಕಾರ್ಯಕಾರಿಣಿ ವ್ಯಕ್ತಿಗಳು ಈ ಎಲ್ಲ ಪ್ರಾಂತೀಯ ಕಛೇರಿಗಳ ಮುಖ್ಯಸ್ಥರಿರುತ್ತಾರೆ. ಅಲ್ಲದೆ, ವಿಸ್ತಾರಗೊಂಡ ವಿಭಾಗಗಳ ಕೇಂದ್ರೀಯ ನಿರೀಕ್ಷಣಾ ಇಲಾಖೆಗಳಾಗಿ 9 ಕೇಂದ್ರೀಯ ನಿರೀಕ್ಷಣಾ ಘಟಕಗಳನ್ನು ಪ್ರಾರಂಭಿಸಿದೆ.

 
ಮುಖ್ಯ ಕಛೇರಿಯ ಸಾಂಸ್ಥಿಕ ರಚನೆ  
ನಿಯಮಾಮಳಿಗಳನ್ನು ರೂಪಿಸಲು ಹಾಗು ಪ್ರಾಂತ್ಯಗಳ ಕಾರ್ಯನಿರ್ವಹಣೆಯ ಮೇಲೆ ಗಮನವಿಡಲು ಮುಖ್ಯ ಕಛೇರಿಯಲ್ಲಿ ಹಲವಾರು ಕಾರ್ಯಕಾರಿ ಇಲಾಖೆಗಳಿರುತ್ತವೆ.
 
ಪ್ರಾಂತೀಯ ಕಛೇರಿಗಳ ಸಾಂಸ್ಥಿಕ ರಚನೆ
ನಮ್ಮ ಬ್ಯಾಂಕು ತಕ್ಷಣದ ಮೇಲ್ವಿಚಾರಣೆ ಮತ್ತು ಶಾಖೆಗಳ ಮೇಲೆ ನಿಯಂತ್ರಣಕ್ಕಾಗಿ 20 ಪ್ರಾಂತೀಯ ಕಛೇರಿಗಳನ್ನು ಪ್ರಾರಂಭಿಸಿದೆ. ಈ ಪ್ರಾಂತೀಯ ಕಚೇರಿಗಳು ಮುಖ್ಯ ಕಛೇರಿಯ ವಿವಿಧ ಕಾರ್ಯಕಾರಿ ಇಲಾಖೆಗಳಿಗೆ ವರದಿ ಮಾಡಿಕೊಳ್ಳುತ್ತವೆ. ವಿವಿಧ ಪ್ರಾಂತೀಯ ಕಛೇರಿಗಳ ಕಾರ್ಯವ್ಯಾಪ್ತಿಯನ್ನು ಈ ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ:-
ಕ್ರ.ಸಂ. ಪ್ರಾಂತ್ಯ ಕಾರ್ಯವ್ಯಾಪ್ತಿ ಶಾಖೆಗಳ ಸಂಖ್ಯೆ (31.01.10ರಂದು ಇದ್ದಂತೆ)

1

ಅಹಮದಾಬಾದ್   ಗುಜರಾತ್ ರಾಜ್ಯದ ಎಲ್ಲ ಶಾಖೆಗಳು

47

2

ಬೆಂಗಳೂರು ಉತ್ತರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಶಾಖೆಗಳು

58

3

ಬೆಂಗಳೂರು ದಕ್ಷಿಣ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಶಾಖೆಗಳು ಮತ್ತು ಕೋಲಾರ ಜಿಲ್ಲೆಯ ಶಾಖೆಗಳು.

55

4

ಚಂಡೀಗಢ   ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಉತ್ತರಾಂಚಲ & ಹಿಮಾಚಲ ಪ್ರದೇಶದ ಶಾಖೆಗಳು ಹಾಗು ಹರಿಯಾಣ ಮತ್ತು ಶಹಾರನ್ಪುರದ ಕೆಲವು ಶಾಖೆಗಳು.

55

5

ಚೆನ್ನೈ   ತಮಿಳುನಾಡು ರಾಜ್ಯದಲ್ಲಿರುವ ಮತ್ತು ಪಾಂಡಿಚೆರಿ ಮತ್ತು ಅಂಡಮಾನ್ ನಿಕೋಬಾರ್ ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಶಾಖೆಗಳು

77

6

ದಿಲ್ಲಿ   ದಿಲ್ಲಿ, ರಾಜಾಸ್ಥಾನದಲ್ಲಿರುವ ಶಾಖೆಗಳು ಮತ್ತು ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿರುವ ಕೆಲವು ಶಾಖೆಗಳು .

75

7

ಗುವಹಾತಿ   ಈಶಾನ್ಯ ಕ್ಷೇತ್ರದಲ್ಲಿರುವ ರಾಜ್ಯಗಳಲ್ಲಿನ ಶಾಖೆಗಳು ಅಂದರೆ ತ್ರಿಪುರಾ, ಮಿಜ಼ೋರಾಮ್, ನಾಗಾಲ್ಯಾಂಡ್, ಮೇಘಾಲಯ, ಮಣಿಪುರ.

25

8

ಹುಬ್ಬಳ್ಳಿ   ಕರ್ನಾಟಕ ರಾಜ್ಯದಲ್ಲಿರುವ ಗದಗ, ಬಿಜಾಪುರ, ಧಾರವಾಡ, ಬೆಳಗಾಂ, ಬೀದರ್, ಗುಲ್ಬರ್ಗ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ಹುಬ್ಬಳ್ಳಿ ಮತ್ತು ಕೊಪ್ಪಳದ ಶಾಖೆಗಳು ಹಾಗು ಗೋವಾದಲ್ಲಿರುವ ಶಾಖೆಗಳು.

70

9

ಹೈದರಾಬಾದ್   ಅನಂತಪುರ, ಕಡಪ, ಹೈದರಾಬಾದ್, ಸಿಕಂದರಾಬಾದ್, ಕರೀಮ್‍ನಗರ, ಖಮ್ಮಮ್, ಕರ್ನೂಲು, ಮಹಬೂಬ್‍ನಗರ, ನಿಜ಼ಾಮಬಾದ್, ರಂಗಾರೆಡ್ಡಿ ಮತ್ತು ವಾರಂಗಲ್ ಜಿಲ್ಲೆಗಳಲ್ಲಿನ ಆಂಧ್ರಪ್ರದೇಶದ ಶಾಖೆಗಳು

59

10

ಕೊಚ್ಚಿ ಕಾಸರಗೋಡು ಜಿಲ್ಲೆಯನ್ನು ಹೊರತುಪಡಿಸಿ ಕೇರಳದ ಎಲ್ಲ ಶಾಖೆಗಳು

69

11

ಕೋಲ್ಕತ್ತ   ಛತ್ತೀಸ್‍ಘಡ, ಝಾರ್ಖಂಡ್, ಪಶ್ಚಿಮ ಬಂಗಾಳ, ಒರಿಸ್ಸಾ, ಬಿಹಾರ್, ಸಿಕ್ಕಿಂನಲ್ಲಿರುವ ಶಾಖೆಗಳು

62

12

ಲಕ್ನೋ ಉತ್ತರ ಪ್ರದೇಶದಲ್ಲಿರುವ ಕೆಲವು ಶಾಖೆಗಳು ಮತ್ತು ನೈನಿತಾಲ್ ಶಾಖೆ

62

13

ಮಂಗಳೂರು   ಕರ್ನಾಟಕದ ಮಂಗಳೂರು ಜಿಲ್ಲೆಯಲ್ಲಿರುವ ಶಾಖೆಗಳು ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಶಾಖೆಗಳು

71

14

ಮುಂಭಾಯಿ ವಿಶಾಲ ಮುಂಬಾಯಿ ಮತ್ತು ಥಾಣೆ ಜಿಲ್ಲೆಯ ಶಾಖೆಗಳು .

62

15

ಮೈಸೂರು  ಕರ್ನಾಟಕ ರಾಜ್ಯದ ಮೈಸೂರು, ಮಂಡ್ಯ ಜಿಲ್ಲೆಯ ಶಾಖೆಗಳು

59

16

ಶಿವಮೊಗ್ಗ   ಕರ್ನಾಟಕ ರಾಜ್ಯದ ಶಿವಮೊಗ್ಗ, ಹಾವೇರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿರುವ ಶಾಖೆಗಳು

36

17

ಉಡುಪಿ   ಕರ್ನಾಟಕ ರಾಜ್ಯದ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿರುವ ಶಾಖೆಗಳು

69

18

ವಿಜಯವಾಡ   ಆಂಧ್ರಪ್ರದೇಶ ರಾಜ್ಯದ ಚಿತ್ತೂರು, ಪೂರ್ವ ಗೋದಾವರಿ, ಗುಂಟೂರು, ಕೃಷ್ಣ, ನೆಲ್ಲೂರು, ಪ್ರಕಾಶಂ, ಶ್ರೀಕಾಕುಳಂ, ವಿಶಾಖಪಟ್ಟಣಂ, ವಿಜಯನಗರಂ, ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿನ ಶಾಖೆಗಳು

43

19

ನಾಗ್ಪುರ ಮಹಾರಾಷ್ಟ್ರ(ವಿಶಾಲ ಮುಂಬಯಿ ಮತ್ತು ಥಾಣೆ ಜಿಲ್ಲೆಗಳಲ್ಲಿರುವ ಶಾಖೆಗಳನ್ನು ಹೊರತುಪಡಿಸಿ), ಮಧ್ಯ ಪ್ರದೇಶ ಮತ್ತು ಛತ್ತೀಸ್‍ಗಢ ರಾಜ್ಯಗಳಲ್ಲಿನ ಶಾಖೆಗಳು.

 51

 20

 ಹಾಸನ ಕರ್ನಾಟಕ ರಾಜ್ಯದ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿನ ಶಾಖೆಗಳು

53

ಒಟ್ಟು                                                                                                                                                                                                                          1158
 
ಪ್ರಾಂತೀಯ ನಿರೀಕ್ಷಣಾ ಘಟಕಗಳು
ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿನ ಕೇಂದ್ರೀಯ ನಿರೀಕ್ಷಣಾ ಇಲಾಖೆಯ ವಿಸ್ತರಿಸಿದ ಅಂಗಗಳಾಗಿ 9 ಪ್ರಾಂತೀಯ ನಿರೀಕ್ಷಣಾ ಘಟಕಗಳನ್ನು ಪ್ರಾರಂಭಿಸಲಾಗಿದೆ.
ಕ್ರ.ಸಂ ಪ್ರಾಂತೀಯ ನಿರೀಕ್ಷಣಾ ಘಟಕ ಪ್ರಾಂತ್ಯ (31.01.2010ರಲ್ಲಿದ್ದಂತೆ)

1

ದಿಲ್ಲಿ ದಿಲ್ಲಿ
    ಚಂಡೀಗಢ
    ಲಕ್ನೋ

2

ಮುಂಬಯಿ ಅಹಮದಾಬಾದ್
    ಮುಂಬಯಿ

3

ಹುಬ್ಬಳ್ಳಿ ಹುಬ್ಬಳ್ಳಿ
    ಶಿವಮೊಗ್ಗ

4

ಹೈದರಾಬಾದ್ ಹೈದರಾಬಾದ್
    ವಿಜಯವಾಡ

5

ಕೋಲ್ಕತ್ತ ಕೋಲ್ಕತ್ತ
    ಗುವಹಾತಿ

6

ಮಂಗಳೂರು ಮಂಗಳೂರು
    ಉಡುಪಿ

7

ಮೈಸೂರು ಮೈಸೂರು

8

ಚೆನ್ನೈ ಚೆನ್ನೈ
    ಕೊಚ್ಚಿ

9

ಬೆಂಗಳೂರು

ಬೆಂಗಳೂರು ಉತ್ತರ

    ಬೆಂಗಳೂರು ದಕ್ಷಿಣ
 
ಹಣದ ಖಜಾನೆ
ಶಾಖೆಗಳು ಸಾಕಷ್ಟು ನಗದನ್ನು ನಿರ್ವಹಿಲು ಸಹಾಯ ಮಾಡಲು ಬ್ಯಾಂಕು 29 ಹಣ ಖಜಾನೆಗಳನ್ನು ಸ್ಥಾಪಿಸಿದೆ.
ಕ್ರ.ಸಂ. ಹಣ ಖಜಾನೆಗಳು (31.01.2010ರಂದು ಇದ್ದಂತೆ) ಕ್ರ.ಸಂ. ಹಣ ಖಜಾನೆಗಳು (31.01.2010ರಂದು ಇದ್ದಂತೆ)

1

ದಿಲ್ಲಿ

16

ಶಿವಮೊಗ್ಗ

2

ಮುಂಬಯಿ

17

ಉಡುಪಿ

3

ಬೆಂಗಳೂರು - ಟ್ರಿನಿಟಿ ವೃತ್ತ

18

ಅಹಮದಾಬಾದ್

4

ಹೈದರಾಬಾದ್

19

ತಿರುವಲ್ಲ

5

ಲಕ್ನೋ

20

ನೆಟ್ಟೂರು

6

ಕೊಯಮತ್ತೂರು

21

ಪುತ್ತೂರು

7

ಪಾಟ್ನಾ

22

ಜೈಪುರ

8

ಹುಬ್ಬಳ್ಳಿ

23

ಹಾಸನ

9

ವಿಜಯವಾಡ

24

ಮುರಾದಾಬಾದ್

10

ಚೆನ್ನೈ

25

ಭುವನೇಶ್ವರ

11

ಮೈಸೂರು

26

ಮಧುರೈ

12

ಮಂಗಳೂರು

27

ಬೆಂಗಳೂರು - ಮಲ್ಲೇಶ್ವರಂ

13

ತಿರುಪತಿ

28

ಕರ್ನೂಲ್

14

ಕೋಲ್ಕತ್ತ

29

ರಾಜಮುಂಡ್ರಿ

15

ಕುಂಡೊಟ್ಟಿ    
 
ಸೇವಾ ಶಾಖೆಗಳು 
ಕ್ಷೇತ್ರಮಟ್ಟದಲ್ಲಿನ ಶಾಖೆಗಳ ಜೊತೆಗೆ ಬ್ಯಾಂಕು 12 ಸೇವಾ ಶಾಖೆಗಳನ್ನು ತೆರೆದಿದೆ, ಇವು ಶಾಖೆಗಳ ಮೇಲೆ ಸೆಳೆದ ಸಾಧನಗಳಿಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುತ್ತವೆ, ಜೊತೆಗೆ ವಿಲೇವಾರಿ ಕಾರ್ಯಗಳನ್ನೂ ನಿರ್ವಹಿಸುತ್ತವೆ.
ಕ್ರ.ಸಂ.. ಸೇವಾ ಶಾಖೆ(31.01.10ರಲ್ಲಿದ್ದಂತೆ) ಕ್ರ.ಸಂ.. ಸೇವಾ ಶಾಖೆ(31.01.10ರಲ್ಲಿದ್ದಂತೆ)

1

ದಿಲ್ಲಿ

7

ಹೈದರಾಬಾದ್

2

ಬೆಂಗಳೂರು

8

ಮಂಗಳೂರು

3

ಕೋಲ್ಕತ್ತ

9

ಅಹಮದಾಬಾದ್

4

ಚೆನ್ನೈ

10

ಲಕ್ನೋ

5

ಮುಂಬಯಿ

11

ಮೈಸೂರು

6

ಕೊಚ್ಚಿ

 12

ಹುಬ್ಬಳ್ಳಿ 
       
 
ಶಾಖೆಗಳು
ಬ್ಯಾಂಕು 1151 ಶಾಖೆಗಳನ್ನು ತೆರೆದಿದೆ (31.01.10ರಲ್ಲಿದ್ದಂತೆ) ರಾಜ್ಯವಾರು ಶಾಖೆಗಳ ಜಾಲದ ಹಂಚಿಕೆಯನ್ನು ಕೆಳಗಿನ ಪಟ್ಟಿ ಸೂಚಿಸುತ್ತದೆ:-
 

ರಾಜ್ಯ

                                    ಶಾಖೆಗಳು (31.01.10ರಲ್ಲಿದ್ದಂತೆ)
ಕ್ರ.ಸಂ

ಮೆಟ್ರೋ

ನಗರ

ಅರೆ ನಗರ

ಗ್ರಾಮೀಣ

ಒಟ್ಟು

1

ಅಂಡಮಾನ್ & ನಿಕೋಬಾರ್

 0

 0

 0

1

2

ಆಂಧ್ರಪ್ರದೇಶ

27

36

19

19

101

3

ಅರುಣಾಚಲಪ್ರದೇಶ

0

0

2

1

3

4

ಅಸ್ಸಾಂ

0

9

4

0

13

5

ಬಿಹಾರ

2

5

1

0

8

6

ಚಂಡೀಗಢ

0

3

0

1

4

7

ಛತ್ತೀಸ್‍ಘಡ

0

4

0

0

4

8

ದಿಲ್ಲಿ

37

0

0

0

37

9

ಗೋವಾ

0

0

5

0

5

10

ಗುಜರಾತ್

24

13

8

2

47

11

ಹರಿಯಾಣ

1

14

4

1

20

12

ಹಿಮಾಚಲಪ್ರದೇಶ

0

1

3

0

4

 

 

ರಾಜ್ಯ

ಶಾಖೆಗಳು (31.01.10ರಲ್ಲಿದ್ದಂತೆ)

ಕ್ರ.ಸಂ.

ಮೆಟ್ರೋ

ನಗರ

ಅರೆ ನಗರ

ಗ್ರಾಮೀಣ

ಒಟ್ಟು

13

ಜಮ್ಮು & ಕಾಶ್ಮೀರ

0

3

0

0

3

14

ಝಾರ್ಖಂಡ್

0

6

1

0

7

15

ಕರ್ನಾಟಕ

64

77

89

220

450

16

ಕೇರಳ

0

22

54

6

82

17

ಮಧ್ಯಪ್ರದೇಶ

4

9

0

0

13

18

ಮಹಾರಾಷ್ಟ್ರ

56

27

10

1

94

19

ಮಣಿಪುರ

0

1

0

1

2

20

ಮೇಘಾಲಯ

0

2

0

0

2

21

ಮಿಜ಼ೋರಾಂ

0

1

0

0

1

22

ನಾಗಾಲ್ಯಾಂಡ್

0

0

2

1

3

23

ಒರಿಸ್ಸಾ

0

8

0

0

8

24

ಪಾಂಡಿಚೆರಿ

0

2

0

0

2

25

ಪಂಜಾಬ್

5

12

9

1

27

26

ರಾಜಾಸ್ಥಾನ

3

15

2

1

21

27

ಸಿಕ್ಕಿಂ

0

0

1

0

1

28

ತಮಿಳುನಾಡು

23

27

19

6

75

29

ತ್ರಿಪುರ

0

1

0

0

1

30

ಉತ್ತರ ಪ್ರದೇಶ

27

38

4

1

70

31

ಉತ್ತರಾಂಚಲ

0

4

1

0

5

32

ಪಶ್ಚಿಮ ಬಂಗಾಳ

21

12

2

2

37

 

ಒಟ್ಟು

294

352

241

264

1151

ಶಾಖೆಗಳ ವಿಳಾಸ, ಸಂಪರ್ಕ ದೂರವಾಣಿ ಸಂಖ್ಯೆಗಳನ್ನು ’ಶಾಖೆ/ಎಟಿಎಂ’ ಹುಡುಕಾಟದಡಿಯಲ್ಲಿ ಬ್ಯಾಂಕಿನ ಅಂತರ್ಜಾಲ ತಾಣವಾದ (.vijayabank.com )ದಲ್ಲಿ ಒದಗಿಸಲಾಗಿದೆ
ವಿಷಯದ ಸಂ. ಅನುಕೂಲ ವಿವರಗಳು
4.1 ಬಿ (ii)

ಅಧಿಕಾರಿಗಳು ಮತ್ತು ಉದ್ಯೋಗಿಗಳ ಅಧಿಕಾರಗಳು ಮತ್ತು ಕರ್ತವ್ಯಗಳು

ಬ್ಯಾಂಕಿಂಗ್ ರೆಗ್ಯುಲೇಶನ್ ಕಾಯಿದೆ, 1949 ರ 6ನೇ ವಿಭಾಗದಲ್ಲಿ ವಿವರಿಸಲಾಗಿರುವ ಬ್ಯಾಂಕಿನ ವ್ಯವಹಾರಗಳನ್ನು ನಡೆಸಲು ಬ್ಯಾಂಕಿನ ಅಧಿಕಾರಿಗಳಿಗೆ ಸೂಕ್ತ ಅಧಿಕಾರಗಳನ್ನು ನೀಡಲಾಗಿದೆ. ಕೆಲವು ಅಧಿಕಾರಗಳನ್ನು ಈ ಕೆಳಗೆ ಹೇಳಲಾಗಿದೆ :  

1.     ತನ್ನ ಕೈಗಳಿಗೆ ಬರುವ ಯಾವುದೇ ರೀತಿಯ ಹಣವನ್ನು ಸ್ವೀಕರಿಸುವ, ಸಹಿ ಮಾಡುವ ಮತ್ತು ಊರ್ಜಿತಕ್ಕೆ ಬರುವ ಸ್ವೀಕೃತಿಗಳನ್ನು ಮತ್ತು ಸಂದಾಯಗಳನ್ನು ನಿಭಾಯಿಸುವುದು.  

2.     ಬ್ಯಾಂಕಿನ ನಿರ್ದೇಶಕ ಮಂಡಲಿಯು ಕಾಲಕಾಲಕ್ಕೆ ನಿರ್ಧರಿಸಿದ ಕಾರ್ಯನೀತಿ ಮತ್ತು ಷರತ್ತುಗಳಿಗೆ ಅನುಸಾರವಾಗಿ ಠೇವಣಿಗಳನ್ನು ಸ್ವೀಕರಿಸುವುದು ಮತ್ತು ಪಾವತಿಸುವುದು ಹಾಗು ಸ್ವೀಕೃತಿಗಳಿಗೆ, ಪಾಸ್‍ಬುಕ್ಕುಗಳನ್ನು ನೀಡುವುದು ಮತ್ತು ಸಹಿ ಮಾಡುವುದು. ಹಾಗೆ ಸ್ವೀಕರಿಸಿದ ಮತ್ತು ಪಾವತಿ ಮಾಡಿದ ಸ್ಥಿರ ಮತ್ತು ಇತರ ಠೇವಣಿಗಳ ಮೇಲೆ ಬಡ್ಡಿಯನ್ನು ಬ್ಯಾಂಕಿನ ನಿರ್ದೇಶಕ ಮಂಡಲಿಯು ನಿರ್ಧರಿಸಿ ನಿಗದಿಪಡಿಸಿದಂತೆ ಕಾಲಕಾಲಕ್ಕೆ ಅಥವ ವಿಶೇಷ ಪ್ರಕರಣದಲ್ಲಿ, ಬಡ್ಡಿ ಪಾವತಿಸುವುದು.

3.     ಬ್ಯಾಂಕಿನ ಹೆಸರಿನಲ್ಲಿ, ಬ್ಯಾಂಕರುಗಳ ಹೆಸರಲ್ಲಿ ಮತ್ತು ಇತರರ ಹೆಸರಲ್ಲಿ, ಭಾರತದ ಒಳಗೆ ಅಥಾವ ಹೊರಗೆ ಖಾತೆ ತೆರೆಯುವುದು, ವ್ಯವಹರಿಸುವುದು, ಸೆಳೆಯುವುದು ಮತ್ತು ಖಾತೆಗಳನ್ನು ಮುಚ್ಚುವುದು ಹಾಗು ಅಂಥ ಖಾತೆ ಅಥಾವ ಖಾತೆಗಳ ಮೇಲೆ ಠೇವಣಿ ಮೀರಿ ಹಣ ಸೆಳೆಯುವ, ಹಾಗು ಅಂಥ ಎಲ್ಲ ಉದ್ದೇಶಗಳ ಮೇಲೆ ಸೆಳೆಯುವ, ಸಹಿ ಮಾಡುವ, ಚೆಕ್ಕುಗಳನ್ನು, ಸ್ವೀಕೃತಿಗಳನ್ನು, ನೀಡುವ ಹಾಗು ಸಂದಾಯಗಳು ಅಥಾವ ಇತರ ಸಾಧನಗಳನ್ನು ಮಾಡುವ ಹಾಗು ಕಾಲಕಾಲಕ್ಕೆ ಬ್ಯಾಂಕು ಮತ್ತು ಯಾವುದೇ ವ್ಯಕ್ತಿ ಅಥಾವ ವ್ಯಕ್ತಿಗಳ ನಡುವೆ ಬಾಕಿ ಇರುವ ಖಾತೆಗಳನ್ನು ಪರೀಕ್ಷಿಸಲು, ತಿಳಿಸಲು, ತೀರ್ಮಾನಿಸಲು ಮತ್ತು ಹೊಂದಾಣಿಕೆ ಮಾಡುವ ಕರ್ತವ್ಯಗಳಿರುತ್ತವೆ.          

ವಿಷಯದ ಸಂ. ಅನುಕೂಲ ವಿವರಗಳು
   

4.     ಬ್ಯಾಂಕಿಗೆ ಸೇರಿದ ಹಣವನ್ನು ಹೂಡುವ ಅಥಾವ ಸರ್ಕಾರಿ ಠೇವಣಿಗಳಲ್ಲಿರುವ, ಟ್ರಸ್ಟೀ ಠೇವಣಿಗಳು, ಡಿಬೆಂಚರ್ ಗಳು ಅಥಾವ ಸಾರ್ವಜನಿಕ ಅಂಗದ ಅಥಾವ ಸ್ಥಳೀಯ ಅಧಿಕಾರದ ಷೇರುಗಳನ್ನು ಗ್ರಾಹಕರಿಗೆ ಪಾವತಿಸುವುದು.

5.     ವ್ಯವಹಾರದ ಕ್ರಮೇಣ ಸಮಯದಲ್ಲಿ ಯಾವುದೇ ಗ್ರಾಹಕರ ಬ್ಯಾಂಕಿನ ತನ್ನ ಕಾರ್ಯವೈಖರಿಯ ಬಗ್ಗೆ ಮೂರನೆಯ ವ್ಯಕ್ತಿಯ ಜೊತೆ ತಾವು ಪ್ರವೇಶಿಸಿರುವ ಯಾವುದೇ ವ್ಯವಹಾರಕ್ಕೆ ಮೂರನೆಯ ವ್ಯಕ್ತಿಯ ಜೊತೆ ಅಥಾವ ಮೂರನೆಯ ವ್ಯಕ್ತಿಗೆ ನೀಡಿರುವ ಇನ್ನಾವುದಾದರೂ ಬಾಧ್ಯತೆಗಳನ್ನು ಖಾತರಿಪಡಿಸುವುದು.

6.     ಯಾವುದೇ ರಾಜ್ಯ ಸರ್ಕಾರದ ಅಥಾವ ಸ್ಥಳೀಯ ಅಧಿಕಾರ, ನಗರಪಾಲಿಕೆ, ಯಾವುದಾದರೂ ಸಂಘಟಿತವಾಗಿರುವ ಕಂಪನಿ ಅಥಾವ ಆಗಿಲ್ಲದಿರುವ ಅಂಗಗಳ ಅಥಾವ ರೈಲ್ವೆ, ಬ್ಯಾಂಕುಗಳ ಅಥಾವ ಇನ್ನಿತರ ಜಂಟಿ ಸ್ಟಾಕ್ ಕಂಪನಿಗಳು ಅತವ ಸಹ-ಪಾಲುದಾರಿಕೆಗಳು ಪ್ರಾಮಿಸರಿ ನೋಟುಗಳು, ಸಾಲಗಳು, ಸ್ಟಾಕುಗಳು, ಬಾಂಡುಗಳ ಹಾಗು ಷೇರುಗಳು, ಸ್ಟಾಕುಗಳು ಮತ್ತು ಭಾಜ್ಯಾಂಶಗಳು, ಸ್ಟಾಕುಗಳು (ಶಾಶ್ವತ ಅಥಾವ ಶಾಶ್ವತವಲ್ಲದ) ಅಥಾವ ಇತರ ಎಲ್ಲ ರೀತಿಯ ಠೇವಣಿಗಳು ಮತ್ತು ಹೊಟೆಗಳ ಮೇಲಿನ ಬಡ್ಡಿ ಮತ್ತು ಡಿವಿಡೆಂಡ್ ಅಥಾವ ಭಾಜ್ಯಾಂಶಗಳನ್ನು ಪಡೆಯುವುದು ಮತ್ತು ಪಿಂಚಣಿಗಳು, ಸಂಬಳ, ಬಾಡಿಗೆಗಳು ಅಥಾವ ಇತರ ಆದಾಯಗಳನ್ನು ಸ್ವೀಕರಿಸುವುದು.

7.     ಬ್ಯಾಂಕಿನ ಹೆಸರಿನಲ್ಲಿ ಇಟ್ಟಿರುವ ಸರ್ಕಾರಿ ಠೇವಣಿಗಳು, ಟ್ರಸ್ಟೀ ಠೇವಣಿಗಳು ಅಥಾವ ಇತರ ಅನುಮೋದಿತ ಠೇವಣಿಗಳನ್ನು ಗಿರವಿ ಇಟ್ಟುಕೊಳ್ಳುವುದು, ಆಧಾರ ಇಟ್ಟುಕೊಳ್ಳುವುದು, ಹಕ್ಕುಗಳನ್ನು ವರ್ಗಾಯಿಸುವುದು, ಮಾರಾಟ ಮಾಡುವುದು, ಖಾತೆಯಾಗಿ ಬದಲಾಯಿಸುವುದು ಅಥಾವ ಇತ್ಯರ್ಥಗೊಳಿಸುವುದು, ಹಾಗು ಪ್ರಾಸಂಗಿಕ ಅಥಾವ ಅನುಕೂಲವಾಗುವ, ಸಾಲಗಳು ಅಥಾವ ಹಣವನ್ನು ಹೆಚ್ಚಿಸುವ ಅಥಾವ ಗಳಿಸುವ ಎಲ್ಲ ಕಾರ್ಯಗಳನ್ನೂ ಸೇರಿಸಿದಂತೆ ಈ ಮೇಲಿನ ವಸ್ತುಗಳನ್ನು ಪಡೆಯುವ ಎಲ್ಲ ಕಾರ್ಯಗಳನ್ನು ನಿರ್ವಹಿಸುವುದು . 

ವಿಷಯದ ಸಂ. ಅನುಕೂಲ ವಿವರಗಳು
   

8.     ಬ್ಯಾಂಕಿನ ಹೆಸರಿನಲ್ಲಿರುವ ಅಥಾವ ಪರವಾಗಿರುವ ಚೆಕ್ಕುಗಳು, ಡ್ರಾಫ಼್ಟುಗಳು, ಹುಂಡಿಗಳು, ವಿನಿಮಯ ಬಿಲ್ಲುಗಳು, ವ್ಯವಹಾರ್ಯಗಳು ಮತ್ತು ವಾಣಿಜ್ಯ ಸಾಧನಗಳನ್ನು ಮಾಡುವ ಪತ್ರಗಳನ್ನು ರಚಿಸುವ, ಸಹಿ ಮಾಡುವ, ಹಕ್ಕು ವರ್ಗಾವಣೆ ಮಾಡುವ, ಕೊಳ್ಳುವ, ಮಾರುವ, ರಿಯಾಯಿತಿ ನೀಡುವ ಅಥಾವ ಒಪ್ಪಿಕೊಳ್ಳುವ ಕಾರ್ಯಗಳು.

9.     ದಿವಾಳಿ ಅಥಾವ ಪಾಪರ್ ಆದ ಸಂದರ್ಭಗಳಲ್ಲಿ ಹುಟ್ಟಿಕೊಳ್ಳುವ ಸಾಂದರ್ಭಿಕವಾದ ಅಥಾವ ಯಾವುದಾದರೂ ಒಪ್ಪಂದ ಅಥಾವ ಸಾಲಗಾರರಾಗಿರುವ ಅಥಾವ ಬ್ಯಾಂಕಿಗೆ ಬಾಧ್ಯಸ್ಥರಾಗಿರುವ ಅಥಾವ ಹಾಗೆಂದು ದಾವೆ ಹೂಡಿರುವವರ ಜೊತೆ ಅಥಾವ ಸಾಲ ನೀಡುವವರ ಜೊತೆಗಿನ ವ್ಯಕ್ತಿಯ ಅಥಾವ ವ್ಯಕ್ತಿಗಳ ಇನ್ನಾವುದಾದರೂ ವ್ಯವಸ್ಥೆಯ ಜೊತೆ, ಸಾಲ ಮಾಡಿದ ನಂತರ ಮುಚ್ಚಿಹೋಗುತ್ತಿರುವ ಯಾವುದಾದರೂ ಕಂಪನಿ ಅಥಾವ ಬಾಧ್ಯತೆಯಲ್ಲಿರುವ ಅಥಾವ ಹಾಗೆಂದು ದಾವೆ ಹೂಡಿರುವವರ ಜೊತೆಗಿನ ಎಲ್ಲ ಸಂದರ್ಭಗಳಲ್ಲಿ ಬ್ಯಾಂಕಿನ ಪರವಾಗಿ ವರ್ತಿಸುವುದು.

10.   ಬ್ಯಾಂಕಿನ ಹೆಸರಿನಲ್ಲಿರುವ ಅಥಾವ ಬ್ಯಾಂಕಿನ ಪರವಾಗಿ ಇರುವ ಎಲ್ಲ ಸಾಲಗಳು, ಮುಂಗಡಗಳು ಮತ್ತು ಬ್ಯಾಂಕಿಗೆ ಇರುವ ದಾವೆಗಳ ಕುರಿತು ಬೇಡಿಕೆ ನೀಡುವುದು, ಸಂಗ್ರಹಿಸುವುದು, ಪಡೆಯುವುದು ಮತ್ತು ಪ್ರಾಮಾಣಿಕ ತೀರುವಳಿ ಮಾಡುವುದು; ಇನ್ನೂ ಮುಂದುವರೆದು ಹೇಳಿದ ಸಾಲಗಳು ಮತ್ತು ಮುಂಗಡಗಳನ್ನು ವಾಪಸ್ಸು ಪಡೆಯಲು ಸೂಕ್ತವಾಗಿರುವ ಎಲ್ಲ ಕಾನೂನು ಕ್ರಮಗಳನ್ನು ಬಳಸುವುದು ಹಾಗು ಅದಕ್ಕೆ ಸಂಬಂಧಿಸಿದ ಎಲ್ಲ ಕಾನೂನು ಪ್ರಕ್ರಿಯೆಗಳನ್ನು, ಕ್ರಮಗಳನ್ನು, ಬೇಡಿಕೆಗಳನ್ನು, ದಾವೆಗಳನ್ನು, ಆಗ್ರಹಗಳನ್ನು, ಮೊಕದ್ದಮೆಗಳನ್ನು ಆರಂಭಿಸುವುದು, ಮುಂದುವರೆಸುವುದು ಹಾಗು ಪ್ರತಿವಾದಿಸುವುದು.

11.      ಯಾವುದೇ ಸಿವಿಲ್ ಅಥಾವ ಕ್ರಿಮಿನಲ್ ನ್ಯಾಯಾಲಯಗಳಲ್ಲಿ ಬ್ಯಾಂಕಿನ ವ್ಯವಹಾರಗಳಿಗೆ ಸಂಬಂಧಿಸಿದ ಭಾರತದ ಒಳಗೆ ಅಥಾವ ಹೊರಗೆ ನಡೆಯುವ ವಿಚಾರಣೆಗಳನ್ನು ಆರಂಭಿಸುವುದು, ವಿಚಾರಣೆಗೊಳಪಡಿಸುವುದು, ಉತ್ತರಗಳನ್ನು ಸಮರ್ಥಿಸಿಕೊಳ್ಳುವುದು, ಉತ್ತರ ನೀಡುವುದು ಅಥಾವ ವಿರೋಧಿಸುವುದು ಇವೆಲ್ಲೆವುಗಳ ಮೂಲಕ ತೀರ್ಪು ಅಥಾವ ತೀರ್ಮಾನ ಅಥಾವ ಬ್ಯಾಂಕಿನ ಪರವಾಗಿ ಆಗುವ ತೀರ್ಪಿನ ವರ್ಗಾವಣೆ ಹಾಗು ಸಾಮಾನ್ಯವಾಗಿ ಎದುರಾಗುವ ಅಂಥ ಎಲ್ಲ ಕ್ರಿಯೆಗಳಲ್ಲಿ, ಕರ್ತವ್ಯಗಳಲ್ಲಿ ಭಾಗವಹಿಸಿ ಅಧಿಕಾರಿಯು ತಾನು ಯಾವುದನ್ನು ಉಚಿತ ಎಂದು ಭಾವಿಸುತ್ತಾನೋ ಹಾಗೆ ವರ್ತಿಸುವುದು.

ವಿಷಯದ ಸಂ. ಅನುಕೂಲ ವಿವರಗಳು
   

12.   ಎಲ್ಲ ವ್ಯವಹಾರಗಳು ಮತ್ತು ಎಸ್ಟೇಟ್ ಗಳ ಅವಧಿ ಎಷ್ಟೇ ಕಾಲದ್ದಾಗಿದ್ದರೂ ಹಾಗು ಬ್ಯಾಂಕಿನ ವಶದಲ್ಲಿರುವ ಅಥಾವ ತನ್ನ ಹಕ್ಕಿನಲ್ಲಿರುವ ಅಥಾವ ಹಕ್ಕಿಗೆ ಬರಲಿರುವಂಥವನ್ನು ನಿರ್ವಹಿಸುವುದು ಮತ್ತು ವ್ಯವಸ್ಥಾಪಸುವುದು.

13.   ಶಾಶ್ವತ ಭೋಗ್ಯವನ್ನು ಹೊರತುಪಡಿಸಿ ಮಿಕ್ಕ ಭೋಗ್ಯಗಳನ್ನು ಮಾಡುವುದು, ಎಲ್ಲ ಅಥವ ಯಾವುದಾದರೂ ಮುಕ್ತ ಹಿಡಿತದಲ್ಲಿರುವ ಅಥವ ಬ್ಯಾಂಕಿನ ಭೋಗ್ಯದಲ್ಲಿರವ ಆಸ್ತಿಗಳನ್ನು ಪರಿಣಾಮಕಾರಿ ಯಾಗಿ ಸ್ವಂತಕ್ಕೆ ತೆಗೆದುಕೊಳ್ಳುವದ, ಭೋಗ್ಯಗಳನ್ನು ಮತ್ತು ಗೇಣಿಗಳನ್ನು ನೀಡಿದಾಗ ಒಪ್ಪಿಸಿಕೊಳ್ಳುವುದು, ಬೇಡಿಕೆ ನೀಡುವುದು, ದಾವೆ ಹೂಡುವುದು, ಬಾಡಿಗೆಗಳು ಮತ್ತು ಲಾಭಗಳನ್ನು ಸಂಗ್ರಹಿಸುವುದು ಮತ್ತು ಪರಿಣಾಮಕಾರಿ ತೀರ್ಮಾನಗಳಿಗೆ ನೀಡುವುದು.

14.   ಕಾಲಕಾಲಕ್ಕೆ ಮುಂಚಿನ ನಿರ್ವಹಣಾ ಮಂಜೂರಾತಿಯನ್ನು ಹೊಂದಾಣಿಕೆ ಮಾಡುವ, ತೀರುವಳಿ ಮಾಡುವ, ಹಿಂದೆಗೆಯುವ, ಒಪ್ಪಂದ ಮಾಡಿಕೊಳ್ಳುವ ಅಥಾವ ಯಾವುದೇ ಬೇಡಿಕೆಗಳ, ವಿವಾದಗಳ ಮತ್ತು ಈ ಮುಂಚೆ ಹೇಳಿದ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ಅಥಾವ ಅಸ್ತಿತ್ವದಲ್ಲಿರುವ ಇನ್ನಾವುದಾದರೂ ವಿಷಯಗಳು ಅಥಾವ ಉಲ್ಲೇಖಿತ ಬ್ಯಾಂಕು ಮತ್ತು ಇತರ ಅನ್ಯ ವ್ಯಕ್ತಿ ಅಥಾವ ವ್ಯಕ್ತಿಗಳ ಜೊತೆ ಇನ್ನೂ ಮುಂದೆ ಹುಟ್ಟಬಹುದಾದ ವಿಷಯಗಳು ಒಂದು ಮಧ್ಯಸ್ತಿಕೆಗೆ ಸಲ್ಲಿಸುವುದು.

15.   ಕಾಲಕಾಲಕ್ಕೆ ನಿರ್ವಹಣೆಯ ಮುಂಚಿನ ಮಂಜೂರಾತಿಯಿಂದ, ಬ್ಯಾಂಕನ್ನು ಈ ಸಮಯ ಅಥಾವ ನಂತರದಲ್ಲಿ ನೀಡಲಾದ ಯಾವುದಾದರೂ ಸಾಲ ಅಥಾವ ಮೊತ್ತ ಅಥಾವ ಬ್ಯಾಂಕಿನಲ್ಲಿ ಇರುವ ಯಾವುದಾದರೂ ಬೇರೆಯ ದಾವೆಗಳು ಅಥಾವ ಬೇಡಿಕೆಯ ಥರದಿಂದ ಅಥಾವ ಒಪ್ಪಂದದ ಮೂಲಕ ತೀರಿಸುವ ಬದಲು ಮತ್ತು ತೀರುವಳಿಯ ರೂಪದಲ್ಲಿ ಮೊತ್ತವನ್ನು ಎಲ್ಲ ರೀತಿಯಿಂದ ಮತ್ತು ಅಂಶದಲ್ಲಿ ಸ್ವೀಕರಿಸುವುದು ಅಥಾವ ಠೇವಣಿಯನ್ನು ಪಡೆದು ಅಥಾವ ಪಡೆಯದೆ, ಸರಿ ಅನಿಸಿರುವ ಷರತ್ತುಗಳ ಮೇಲೆ ಪಾವತಿಯ ಅವಧಿಯನ್ನು ವಿಸ್ತರಿಸುವುದು.

ವಿಷಯದ ಸಂ. ಅನುಕೂಲ ವಿವರಗಳು
   

16. ಬ್ಯಾಂಕಿನ ಹೆಸರಿನಲ್ಲಿರುವ, ಜಂಟಿ ಸ್ಟಾಕ್ ಕಂಪನಿಗಳು ಅಥಾವ ವಿಮಾ ಪಾಲಿಸಿಗಳನ್ನು ಪಡೆಯುವುದು ಹಾಗೂ ಬ್ಯಾಂಕಿನ ಹೆಸರಿನಲ್ಲಿ ಮರುನೇಮಿಸುವ, ವರ್ಗಾಯಿಸುವ, ಮಾರುವ ಅಥಾವ ವಿಮಾ ತ್ಯಾಗ ಮಾಡುವ ಕಾರ್ಯಗಳನ್ನು ಮಾಡುವುದು.

17. ಷೇರುಗಳ ಬೇಡಿಕೆಯನ್ನು ಪಾವತಿಸುವ ಮತ್ತು ಬ್ಯಾಂಕು ಷೇರುದಾರಿಕೆ ಹೊಂದಿರುವ ಯಾವುದೇ ಕಂಪನಿಯ ಯಾವುದೇ ಸಭೆಗಳಲ್ಲಿ ಮತದಾನ ಮಾಡುವುದು.

18. ಬ್ಯಾಂಕಿನ ವಶಕ್ಕೆ ಒಪ್ಪಿಸಿರುವ ಎಸ್ಟೇಟ್ ಗಳ ಕಾರ್ಯನಿರ್ವಾಹಕ. ಟ್ರಸ್ಟೀ, ಆಡಳಿತಗಾರ ಅಥಾವ ಅಂಥ ಜವಾಬ್ದಾರಿಗಳನ್ನು ನಿರ್ವಹಿಸುವುದು.

19. ಗ್ರಾಹಕರ ಪರವಾಗಿ ಅದಾಯ ತೆರಿಗೆ ಅಥಾವ ತೆರಿಗೆ ಹಿಂಪಡೆಯುವ ವಿವರಗಳನ್ನು ಸಿದ್ಧಪಡಿಸಿ ಅರ್ಜಿ ಸಲ್ಲಿಸವುದು ಮತ್ತು ಎಲ್ಲ ಆದಾಯ ತೆರಿಗೆ ನ್ಯಾಯಸ್ಥಾನಗಳ ಮುಂದೆ ಕಾಣಿಸಿಕೊಳ್ಳುವುದು.

20. ಬ್ಯಾಂಕಿಗಾಗಿ ಅಥಾವ ಬ್ಯಾಂಕಿನ ಪರವಾಗಿ, ವಿಶೇಷವಾಗಿ ಅಥಾವ ಸಾಮಾನ್ಯ ರೂಪದಲ್ಲಿ ನಿಯುಕ್ತ ಗ್ರಾಹಕರಂತೆ ವರ್ತಿಸುವುದು.

21. ಸೇವೆಯನ್ನು ಒಪ್ಪಿಕೊಳ್ಳುವ, ಹಿಂಪಡೆಯುವಿಕೆಗಳಿಗೆ ಮತ್ತು ದಾಖಲಾತಿಗಳಿಗೆ ಅರ್ಜಿ ಸಲ್ಲಿಸುವ ಮತ್ತು ಈಗ ಚಾಲ್ತಿಯಲ್ಲಿರುವ, ಅಥಾವ ಮುಂದೆ ಚಾಲ್ತಿಗೆ ಬರುವ ಕಂಪನಿ ನಿಯಮ ಅಥಾವ ಇನ್ನಾವುದೇ ಕೇಂದ್ರ ಅಥಾವ ರಾಜ್ಯ ಸರ್ಕಾರಿ ನಿಯಮಗಳ ಅಥಾವ ವಿಧಿಗಳ ಉದ್ದೇಶಗಳಿಗೆ ಸಂಬಂಧಿಸಿದಂತೆ ಭಾರತದ ಒಳಗೆ ಅಥಾವ ಹೊರಗೆ ಇರುವ ಅಥಾವ ಮುಂದೆ ಸ್ಥಾಪಿಸುವ ಬ್ಯಾಂಕಿನ ಕಚೇರಿಗಳಲ್ಲಿ ಬ್ಯಾಂಕನ್ನು ಪ್ರತಿನಿಧಿಸುವುದು.

22. ಶುಲ್ಕ, ವೇತನ, ಕಮಿಶನ್ ಅಥಾವ ಇನ್ನಾವುದೇ ಆಧಾರದ ಮೇಲೆ ಅಥಾವ ಅವರಿಗೆ ಸರಿ ಅನಿಸಿದ ರೀತಿಯಲ್ಲಿ ನ್ಯಾಯವಾದಿಗಳೂ ಸೇರಿದಂತೆ, ಏಜಂಟುಗಳನ್ನು, ವಕೀಲರನ್ನು, ಮನವಿದಾರರನ್ನು, ಆಸ್ತಿ ನಿರ್ವಾಹಕರನ್ನು ಅಥಾವ ಇತರ ಕಾನೂನು ವೃತ್ತಿಯವರನ್ನು ನೇಮಿಸಿಕೊಂಡು, ಅವರನ್ನು ಕಾಲಕಾಲಕ್ಕೆ ತೆಗೆದುಹಾಕುವ ಅಥಾವ ಕಾರ್ಯಮುಕ್ತಗೊಳಿಸುವ ಹಾಗೂ ಅವರ ಬದಲಿಗೆ ಬೇರೆಯ ವ್ಯಕ್ತಿಗಳಿಗೆ ಅವಕಾಶ ನೀಡುವುದು.

ವಿಷಯದ ಸಂ. ಅನುಕೂಲ ವಿವರಗಳು
   

23.   ಜಂಟಿ ಸ್ಟಾಕ್ ಮತ್ತು ಇತರ ಬ್ಯಾಂಕುಗಳು ಸಾಮಾನ್ಯವಾಗಿ ಮಾಡುವ ಮತ್ತು ಸಾಮಾನ್ಯವಾಗಿ ಬ್ಯಾಂಕಿನ ವ್ಯವಹಾರಗಳಿಗೆ ಮತ್ತು ಈ ಮುಂಚೆ ಹೇಳಿದ ಉದ್ದೇಶಗಳಿಗೆ ಬೇಕಾಗುವ ಎಲ್ಲದನ್ನೂ ಮಾಡುವುದು.

24.    ಅವಶ್ಯಕತೆ ಇರುವ ಅಥಾವ ಬೇಕಾಗುವಂಥ ಸಾಧನಗಳಿಗೆ, ಸುಭದ್ರತಾ ಬಾಂಡುಗಳು, ಖಾತರಿಗಳು, ಖಾತರಿ ಪತ್ರಗಳು ಮತ್ತು ಇತರ ದಾಖಲಾತಿಗಳು ಹಾಗು ಎಲ್ಲ ವಿಧಿಗಳನ್ನು ಸಾಮಾನ್ಯವಾಗಿ ಸಹಿಮಾಡುವ, ಕಾರ್ಯರೂಪಕ್ಕೆ ತರುವ, ಮಾಡುವ ಕಾರ್ಯಗಳು.

41 ಬಿ (iii)

ಮೇಲ್ವಿಚಾರಣೆಯ ವಿಧಾನಗಳು ಮತ್ತು ಹೊಣೆಗಾರಿಕೆ ಸೇರಿದಂತೆ ನಿರ್ಣಯವನ್ನು ಕೈಗೊಳ್ಳುವಾಗ ಪಾಲಿಸಲಾಗುವ ಪ್ರಕ್ರಿಯೆಗಳು

ನಿರ್ಣಯಗಳನ್ನು ರೂಪಿಸಲು ಬ್ಯಾಂಕು ಒಂದು ಸುಸಜ್ಜಿತ ವ್ಯವಸ್ಥೆಯನ್ನು ಹೊಂದಿದೆ. ಬ್ಯಾಂಕಿನ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ನಿರ್ದೇಶಕ ಮಂಡಲಿಯು ರೂಪಿಸಿದ ಒಟ್ಟಾರೆ ಮೇಲ್ವಿಚಾರಣೆ ಮತ್ತು ನಿಯಂತ್ರಣ ಕಾರ್ಯನೀತಿಗಳಿಗೆ ಅನುಸಾರವಾಗಿ ಬ್ಯಾಂಕು ಕಾರ್ಯನಿರ್ವಹಿಸುತ್ತದೆ. ಅಂಥ ಕಾರ್ಯನೀತಿಗಳನ್ನು ಜಾರಿಗೆ ತರುವಾಗ ವಿವಿಧ ಹಂತಗಳಲ್ಲಿ ಅಧಿಕಾರದಲ್ಲಿರುವ ಅಧಿಕಾರಿಗಳನ್ನು ಅವರ ವರ್ಗ ಶ್ರೇಣಿ ಮತ್ತು ನೇಮಕಾತಿಯ ಅಧಾರದ ಮೇಲೆ ನೇಮಿಸಲಾಗುತ್ತದೆ. ಬ್ಯಾಂಕಿನಲ್ಲಿ ತಮ್ಮ ತಮ್ಮ ಕಾರ್ಯ ನಿರ್ವಹಿಸುವಾಗ ಎಲ್ಲ ನೌಕರರು, ಸಂಪೂರ್ಣವಾಗಿ ಎಲ್ಲ ಕರ್ತವ್ಯ/ನಿಯಮಗಳನ್ನು ಒಳಗೊಂಡ ಸೂಚನೆಗಳ ಪುಸ್ತಕವನ್ನು ಅನುಸರಿಸಬೇಕು. ಬೇರೆಯ ಕಾರ್ಯಗಳಿಗೆ ಸಂಬಂಧಿಸಿದಂತೆ, ಪ್ರತಿ ವಿಭಾಗಕ್ಕೆ ಸಂಬಂಧಿಸಿದ ಕೈಪಿಡಿಯ ಅನುಸಾರವಾಗಿ ಅವರು ಕಾರ್ಯ ನಿರ್ವಹಿಸಬೇಕು. ಇವೆಲ್ಲವೂ ಅಲ್ಲದೆ, ಮುಖ್ಯ ಕಚೇರಿಯು ತನ್ನ ಅಧಿಕಾರಿಗಳು ಕಾರ್ಯರೂಪಕ್ಕೆ ತರಲೆಂದು ಆಗಾಗ ಕಾರ್ಯನೀತಿಗಳಲ್ಲಿ ಆದ ಬದಲಾವಣೆಗಳ ಕುರಿತು ಸುತ್ತೋಲೆಗಳನ್ನು ಕಳಿಸುತ್ತಿರುತ್ತದೆ. ಅಧಿಕಾರಿಗಳು ಸೂಕ್ತ ಪ್ರಕ್ರಿಯೆಯ ನಂತರ ವಿಷಯ/ಪತ್ರಗಳಿಗೆ ಸಂಬಂಧಿಸಿದಂತೆ ಅನುಕೂಲಗಳ ಆಧಾರದ ಮೇಲೆ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ರೂಪಿಸಿದ ಕಾರ್ಯನೀತಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಯಾವುದೇ ಅಧಿಕಾರಿಗೆ ವಿಜಯಾ ಬ್ಯಾಂಕ್ ಅಧಿಕಾರಿ ನೌಕರರ (ವರ್ತನೆ) ಕಾರ್ಯನೀತಿಗಳು, 1981 ಮತ್ತು ವಿಜಯಾ ಬ್ಯಾಂಕ್ ಅಧಿಕಾರಿ ನೌಕರರ (ಶಿಸ್ತು ಮತ್ತು ಅಪೀಲು) ಕಾರ್ಯನೀತಿಗಳು, 1981 ರ ಅಡಿಯಲ್ಲಿ ದಂಡಕ್ಕೆ ಗುರಿಯಾಗುತ್ತಾರೆ

ವಿಷಯದ ಸಂ. ಅನುಕೂಲ ವಿವರಗಳು
   

1.   ಇನ್ನೂ ಮುಂದುವರೆದು, ನಮ್ಮ ಬ್ಯಾಂಕು ’ಬ್ಯಾಂಕು ಠೇವಣಿಗಳ ಮೇಲೆ ಮಾದರಿ ಕಾರ್ಯನೀತಿ’, ’ಕ್ರೆಡಿಟ್ ಕಾರ್ಡ್ ವ್ಯವಹಾರಗಳಿಗೆ ಬ್ಯಾಂಕರುಗಳ ನ್ಯಾಯ ಸಂಹಿತೆ’ ಮತ್ತು ’ಸಾರ್ವಜನಿಕ ಸನ್ನದು’ ಗಳನ್ನೂ ಜಾರಿಗೆ ತಂದಿದ್ದು ಅವು ಬ್ಯಾಂಕಿನ ಅಂತರ್ಜಾಲ ತಾಣದಲ್ಲಿ ಮತ್ತು ಶಾಖೆಗಳು/ಕಛೇರಿಗಳಲ್ಲಿ ಲಭ್ಯವಿರುತ್ತವೆ.

2.    ಆದರೂ, ಸಾಲವನ್ನು ಮಂಜೂರು ಮಾಡುವ ಅಥಾವ ಮಾಡದಿರುವ ಸಂಪೂರ್ಣ ಅಧಿಕಾರವು ಸಂಬಂಧಿಸಿದ ಬ್ಯಾಂಕಿನ ಮಂಜೂರಾತಿ ಅಧಿಕಾರಿಗಿರುತ್ತದೆ ಹಾಗು ಅವರು ಹಾಗೆ ತಮ್ಮ ಅಧಿಕಾರವನ್ನು ಚಲಾಯಿಸುವಾಗ ಪ್ರತಿ ಪ್ರಕರಣಕ್ಕೆ ಸಂಬಂಧಿಸಿದ ಸತ್ಯಾಂಶಗಳನ್ನು ಮತ್ತು ಸಂದರ್ಭಗಳನ್ನು ಪರಿಗಣಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

41 b (iii)

ಮೇಲ್ವಿಚಾರಣೆಯ ವಿಧಾನಗಳು ಮತ್ತು ಹೊಣೆಗಾರಿಕೆ ಸೇರಿದಂತೆ ನಿರ್ಣಯವನ್ನು ಕೈಗೊಳ್ಳುವಾಗ ಪಾಲಿಸಲಾಗುವ ಪ್ರಕ್ರಿಯೆಗಳು

ನಿರ್ಣಯಗಳನ್ನು ರೂಪಿಸಲು ಬ್ಯಾಂಕು ಒಂದು ಸುಸಜ್ಜಿತ ವ್ಯವಸ್ಥೆಯನ್ನು ಹೊಂದಿದೆ. ಬ್ಯಾಂಕಿನ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ನಿರ್ದೇಶಕ ಮಂಡಲಿಯು ರೂಪಿಸಿದ ಒಟ್ಟಾರೆ ಮೇಲ್ವಿಚಾರಣೆ ಮತ್ತು ನಿಯಂತ್ರಣ ಕಾರ್ಯನೀತಿಗಳಿಗೆ ಅನುಸಾರವಾಗಿ ಬ್ಯಾಂಕು ಕಾರ್ಯನಿರ್ವಹಿಸುತ್ತದೆ. ಅಂಥ ಕಾರ್ಯನೀತಿಗಳನ್ನು ಜಾರಿಗೆ ತರುವಾಗ ವಿವಿಧ ಹಂತಗಳಲ್ಲಿ ಅಧಿಕಾರದಲ್ಲಿರುವ ಅಧಿಕಾರಿಗಳನ್ನು ಅವರ ವರ್ಗ ಶ್ರೇಣಿ ಮತ್ತು ನೇಮಕಾತಿಯ ಅಧಾರದ ಮೇಲೆ ನೇಮಿಸಲಾಗುತ್ತದೆ. ಬ್ಯಾಂಕಿನಲ್ಲಿ ತಮ್ಮ ತಮ್ಮ ಕಾರ್ಯ ನಿರ್ವಹಿಸುವಾಗ ಎಲ್ಲ ನೌಕರರು, ಸಂಪೂರ್ಣವಾಗಿ ಎಲ್ಲ ಕರ್ತವ್ಯ/ನಿಯಮಗಳನ್ನು ಒಳಗೊಂಡ ಸೂಚನೆಗಳ ಪುಸ್ತಕವನ್ನು ಅನುಸರಿಸಬೇಕು. ಬೇರೆಯ ಕಾರ್ಯಗಳಿಗೆ ಸಂಬಂಧಿಸಿದಂತೆ, ಪ್ರತಿ ವಿಭಾಗಕ್ಕೆ ಸಂಬಂಧಿಸಿದ ಕೈಪಿಡಿಯ ಅನುಸಾರವಾಗಿ ಅವರು ಕಾರ್ಯ ನಿರ್ವಹಿಸಬೇಕು. ಇವೆಲ್ಲವೂ ಅಲ್ಲದೆ, ಮುಖ್ಯ ಕಚೇರಿಯು ತನ್ನ ಅಧಿಕಾರಿಗಳು ಕಾರ್ಯರೂಪಕ್ಕೆ ತರಲೆಂದು ಆಗಾಗ ಕಾರ್ಯನೀತಿಗಳಲ್ಲಿ ಆದ ಬದಲಾವಣೆಗಳ ಕುರಿತು ಸುತ್ತೋಲೆಗಳನ್ನು ಕಳಿಸುತ್ತಿರುತ್ತದೆ. ಅಧಿಕಾರಿಗಳು ಸೂಕ್ತ ಪ್ರಕ್ರಿಯೆಯ ನಂತರ ವಿಷಯ/ಪತ್ರಗಳಿಗೆ ಸಂಬಂಧಿಸಿದಂತೆ ಅನುಕೂಲಗಳ ಆಧಾರದ ಮೇಲೆ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ರೂಪಿಸಿದ ಕಾರ್ಯನೀತಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಯಾವುದೇ ಅಧಿಕಾರಿಗೆ ವಿಜಯಾ ಬ್ಯಾಂಕ್ ಅಧಿಕಾರಿ ನೌಕರರ (ವರ್ತನೆ) ಕಾರ್ಯನೀತಿಗಳು, 1981 ಮತ್ತು ವಿಜಯಾ ಬ್ಯಾಂಕ್ ಅಧಿಕಾರಿ ನೌಕರರ (ಶಿಸ್ತು ಮತ್ತು ಅಪೀಲು) ಕಾರ್ಯನೀತಿಗಳು, 1981 ರ ಅಡಿಯಲ್ಲಿ ದಂಡಕ್ಕೆ ಗುರಿಯಾಗುತ್ತಾರೆ.

ವಿಷಯದ ಸಂ. ಅನುಕೂಲ ವಿವರಗಳು
   

ಇನ್ನೂ ಮುಂದುವರೆದು, ನಮ್ಮ ಬ್ಯಾಂಕು ’ಬ್ಯಾಂಕು ಠೇವಣಿಗಳ ಮೇಲೆ ಮಾದರಿ ಕಾರ್ಯನೀತಿ’, ’ಕ್ರೆಡಿಟ್ ಕಾರ್ಡ್ ವ್ಯವಹಾರಗಳಿಗೆ ಬ್ಯಾಂಕರುಗಳ ನ್ಯಾಯ ಸಂಹಿತೆ’ ಮತ್ತು ’ಸಾರ್ವಜನಿಕ ಸನ್ನದು’ ಗಳನ್ನೂ ಜಾರಿಗೆ ತಂದಿದ್ದು ಅವು ಬ್ಯಾಂಕಿನ ಅಂತರ್ಜಾಲ ತಾಣದಲ್ಲಿ ಮತ್ತು ಶಾಖೆಗಳು/ಕಚೇರಿಗಳಲ್ಲಿ ಲಭ್ಯವಿರುತ್ತವೆ. ಆದರೂ, ಸಾಲವನ್ನು ಮಂಜೂರು ಮಾಡುವ ಅಥವ ಮಾಡದಿರುವ ಸಂಪೂರ್ಣ ಅಧಿಕಾರವು ಸಂಬಂಧಿಸಿದ ಬ್ಯಾಂಕಿನ ಮಂಜೂರಾತಿ ಅಧಿಕಾರಿಗಿರುತ್ತದೆ ಹಾಗು ಅವರು ಹಾಗೆ ತಮ್ಮ ಅಧಿಕಾರವನ್ನು ಚಲಾಯಿಸುವಾಗ ಪ್ರತಿ ಪ್ರಕರಣಕ್ಕೆ ಸಂಬಂಧಿಸಿದ ಸತ್ಯಾಂಶಗಳನ್ನು ಮತ್ತು ಸಂದರ್ಭಗಳನ್ನು ಪರಿಗಣಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

4.1 ಬಿ (v)

ಬ್ಯಾಂಕಿನ ಬಳಿ ಇರುವ ಅಥಾವ ಅದರ ಅಧೀನದಲ್ಲಿರುವ ಅಥಾವ ಅದರ ನೌಕರರು ಅದರ ಕರ್ತವ್ಯಗಳನ್ನು ನಿಭಾಯಿಸಲು ಬಳಸುವ ನಿಯಮಗಳು, ನಿಬಂಧನೆಗಳು, ಸೂಚನೆಗಳು, ಕೈಪಿಡಿಗಳು ಮತ್ತು ದಾಖಲೆಗಳು.

ಬ್ಯಾಂಕು ನಿಯತಕಾಲಿಕ ಸುತ್ತೋಲೆಗಳು/ಸುತ್ತೋಲೆಗಳಲ್ಲದೆ ಅಧಿಕ ಸಂಖ್ಯೆಯ ’ಕಾರ್ಯನೀತಿ ಪುಸ್ತಿಕೆಗಳನ್ನು, ದಾಖಲಾತಿಯ ಮೇಲೆ ಸಲಹೆಗಳು, ಅಧಿಕಾರಗಳನ್ನು ಚಲಾಯಿಸುವ ವ್ಯವಸ್ಥೆಗಳನ್ನು ಕುರಿತ ಪುಸ್ತಕಗಳನ್ನು ಹೊರತಂದಿದೆ. ತಮ್ಮ ವಿವಿಧ ಕಾರ್ಯಗಳನ್ನು ನಿಭಾಯಿಸುವಾಗ ನೌಕರರು ಇವುಗಳನ್ನು ಬಳಸುತ್ತಾರೆ. ಇವುಗಳು ಆಂತರಿಕ ಪ್ರಸಾರಕ್ಕಾಗಿ ಮಾತ್ರ ಲಭ್ಯವಿರುತ್ತವೆ.

4.1 ಬಿ (vi)

ಬ್ಯಾಂಕಿನಲ್ಲಿರುವ ಅಥಾವ ಅದರ ಅಧೀನದಲ್ಲಿರುವ ವಿವಿಧ ವಿಭಾಗಗಳ ದಾಖಲೆಗಳ ಒಂದು ಪಟ್ಟಿ.

ಇವು ಮುಖ್ಯವಾಗಿ ಷೇರುದಾರರ/ಎಜಿಎಮ್‍ಗಳ, ಮಂಡಲಿಯ ಸಭೆಗಳು ಹಾಗು ವಿವಿಧ ಸಮಿತಿಗಳ ಸಭೆಗಳ ನಡಾವಳಿಗಳ ದಾಖಲೆಗಳು, ಗ್ರಾಹಕರು/ಸಾಲಪಡೆಯುವವರು/ಖಾತರಿದಾರರು, ಮೂರನೆಯ ವ್ಯಕ್ತಿಗಳ ಜೊತೆ ಮಾಡಿದ ಒಪ್ಪಂದಗಳು ಮತ್ತಿತರರಿಗೆ ಸಂಬಂಧಿಸಿದ ದಾಖಲೆಗಳಾಗಿರುತ್ತವೆ. ಈ ದಾಖಲೆಗಳೆಲ್ಲಗಳೆಲ್ಲವೂ ಖಾಸಗಿ ಮಾಹಿತಿಗಳಾಗಿದ್ದು ಅವನ್ನು ಸಾರ್ವಜನಿಕರ ಜೊತೆ ಹಂಚಿಕೊಳ್ಳಲು ಸಾಧ್ಯವಿರುವುದಿಲ್ಲ.

ವಿಷಯದ ಸಂ. ಅನುಕೂಲ ವಿವರಗಳು
   

ಬ್ಯಾಂಕಿನ ಎಲ್ಲ ಶಾಖೆಗಳು ಗಣಕೀಕೃತಗೊಂಡಿರುತ್ತವೆ ಮತ್ತು ದತ್ತಾಂಶವನ್ನು ವಿದ್ಯುನ್ಮಾನ ರೂಪದಲ್ಲಿ ಇಟ್ಟಿರಲಾಗಿರುತ್ತದೆ ಹಾಗು ಅವನ್ನು ಸಂಬಂಧಿತ ಗ್ರಾಹಕರಿಗೆ ಅಥಾವ ವಿವಿಧ ಅಧಿಕಾರಗಳಿಗೆ ವಿವಿಧ ಕಾನೂನುಗಳಿಗೆ ಅನ್ವಯವಾಗುವಂತೆ ಇದ್ದರೆ ನೀಡಬಹುದಾಗಿರುತ್ತದೆ.

4.1 ಬಿ (vii)

ಕಾರ್ಯನೀತಿಯನ್ನು ರೂಪಿಸುವ ಅಥಾವ ನಂತರ ಕಾರ್ಯರೂಪಕ್ಕೆ ತರುವ ಸಂಬಂಧ ಸಲಹೆ ಕೇಳಲು ಅಥಾವ ಸಾರ್ವಜನಿಕ ಸದಸ್ಯರಿಂದ ಪ್ರತಿನಿಧಿತ್ವಕ್ಕಾಗಿ ಇರುವ ವ್ಯವಸ್ಥೆಯ ವಿವರಗಳು

ಸದ್ಯಕ್ಕೆ, ವಾರ್ಷಿಕ ಸಾಮಾನ್ಯ ಸಭೆಗಳಲ್ಲಿ ಬ್ಯಾಂಕಿನ ಷೇರುದಾರರು ಕಾರ್ಯನೀತಿಗಳಿಗೆ ಸಂಬಂಧಿಸಿದ ವಿಷಯಗಳನ್ನು ಎತ್ತಬಹುದಾಗಿದೆ. ಜೊತೆಗೆ, ಬ್ಯಾಂಕಿನ ಕಾಲುವರ್ಷದ ಫಲಿತಾಂಶಗಳು/ವಾರ್ಷಿಕ ಫಲಿತಾಂಶಗಳು/ವರದಿಗಳು ಸಾರ್ವಜನಿಕ ಅಲ್ಲದೆ ಷೇರುದಾರರ ಮಾಹಿತಿಗಾಗಿ ಪ್ರಕಟಿಸಲಾಗುವುದು, ಆ ಮೂಲಕ ಅವರಿಗೆ ಬ್ಯಾಂಕಿನ ಕಾರ್ಯನೀತಿಗಳು ಮತ್ತು ಅವುಗಳು ಜಾರಿಯಾಗುವ ಬಗ್ಗೆ ಅರಿವು ಮೂಡುತ್ತದೆ. ಬ್ಯಾಂಕು ಮಂಡಲಿಯ ಮಟ್ಟದಲ್ಲಿ ಈ ಕೆಳಗಿನ ಸದಸ್ಯರನ್ನು ಒಳಗೊಂಡ ಸಾರ್ವಜನಿಕ ಸೇವಾ ಸಮಿತಿಯನ್ನು ಹುಟ್ಟುಹಾಕಿದೆ :

1. ಅಧ್ಯಕ್ಷರು & ನಿರ್ವಾಹಕ ನಿರ್ದೇಶಕರು ಸಮಿತಿಯ ಅಧ್ಯಕ್ಷರು
2. ಕಾರ್ಯಕಾರಿ ನಿರ್ದೇಶಕರು ಸದಸ್ಯರು
3. ಆರ್.ಬಿ.ಐ. ನಾಮಾಂಕಿತ ನಿರ್ದೇಶಕರು ಸದಸ್ಯರು
4. ಅಧಿಕಾರಿಯೇತರ ನಿರ್ದೇಶಕರು ಸದಸ್ಯರು
5. ಶ್ರೀ ಟಿ.ರುದ್ರಪ್ಪ,  
(ಗ್ರಾಹಕರ ಪ್ರತಿನಿಧಿ)
ಸದಸ್ಯರು

ಒಬ್ಬ ಸದಸ್ಯರು ಬ್ಯಾಂಕಿನ ಗ್ರಾಹಕರನ್ನು ಪ್ರತಿನಿಧಿಸುತ್ತಾರೆ. ಯಾವುದಾದರೂ ಕಾರ್ಯನೀತಿಯಲ್ಲಿ ಬದಲಾವಣೆ ಇದ್ದರೆ ಸಮಿತಿಯ ತೀರ್ಮಾನಗಳನ್ನು ಬ್ಯಾಂಕಿನ ನಿರ್ದೇಶಕರ ಮಂಡಲಿಯ ಮುಂದಿಡಲಾಗುತ್ತದೆ

ವಿಷಯದ ಸಂ. ಅನುಕೂಲ ವಿವರಗಳು
4.1 ಬಿ (viii)

ಇಬ್ಬರು ಅಥಾವ ಹೆಚ್ಚು ವ್ಯಕ್ತಿಗಳನ್ನು ಒಳಗೊಂಡ ಮಂಡಲಿಗಳ, ಕೌನ್ಸಿಲ್ಲುಗಳ, ಸಮಿತಿಗಳ ಮತ್ತು ಇತರ ಅಂಗಗಳು ಅದರ ಭಾಗವಾಗಿ ಅಥಾವ ಅದರ ಸಲಹೆಯ ಸಲುವಾಗಿ ಮಂಡಲಿಗಳ, ಕೌನ್ಸಿಲ್ಲುಗಳ, ಸಮಿತಿಗಳ ಮತ್ತಿತರ ಅಂಗಗಳ ಸಭೆಗಳಿಗೆ ಸಾರ್ವಜನಿಕರಿಗೆ ಪ್ರವೇಶವಿದೆಯೆ ಅಥಾವ ಅಂಥ ಸಭೆಗಳ ನಡಾವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೆ ಎಂಬ ಕುರಿತು

ಬ್ಯಾಂಕು ಮಂಡಲಿಯ ವಿವಿಧ ಸಮಿತಿಗಳನ್ನು ಪ್ರಾರಂಭಿಸಿದೆ:-

 1. ಮಂಡಲಿಯ ನಿರ್ವಾಹಕ ಸಮಿತಿ
 2. ಮಂಡಲಿಯ ಲೆಕ್ಕಪತ್ರ ಸಮಿತಿ
 3. ನಿರ್ದೇಶಕರ ಪದೋನ್ನತಿಯ ಸಮಿತಿ
 4. ನಷ್ಟ ನಿರ್ವಹಣೆ ಸಮಿತಿ
 5. ರೂ.1 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೋಸದ ಪ್ರಕರಣಗಳನ್ನು ಪರಿಶೀಲಿಸಲು ವಿಶೇಷ ಸಮಿತಿ
 6. ಷೇರುದಾರರ ಮತ್ತು ಹೂಡಿಕೆದಾರರ ಕುಂದು ಕೊರತೆ ಸಮಿತಿ
 7. ಷೇರು ವರ್ಗಾವಣೆ ಸಮಿತಿ
 8. ಗ್ರಾಹಕ ಸೇವಾ ಸಮಿತಿ
 9. ಸಂಭಾವನೆ ಸಮಿತಿ 
 10. ನಾಮಕರಣ ಸಮಿತಿ
 11. ಚುನಾವಣಾ ವಿವಾದಗಳನ್ನು ಬಗೆಹರಿಸಲು ಸಮಿತಿ
 12. ಡಿ.ಎ. ಆಗಿ ಸಿ.ಎಂ.ಡಿ. ಯವರಿಂದ ಹೊರಡಿಸಲಾದ ಅಂತಿಮ ಆದೇಶಗಳ
  ವಿರುದ್ಧ ನೌಕರರು ಸಮಿತಿಗೆ ಸಲ್ಲಿಸುವ ಮನವಿಗಳನ್ನು ಪರಿಗಣಿಸುವ ಸಮಿತಿ.
 13. ಹಂಚಿಕೆ ಸಮಿತಿ

 

ಸಮಿತಿಯ ಹೆಸರು                         ( 02.07.2011ರಂದು ಇದ್ದಂತೆ)

           ಸದಸ್ಯರು

ನಿರ್ವಹಣಾ ಸಮಿತಿ 

1. ಶ್ರೀ ಎಚ್.ಎಸ್. ಉಪೇಂದ್ರ ಕಾಮತ್  (ಸಮಿತಿಯ ಅಧ್ಯಕ್ಷರು)
2. ಶ್ರೀಮತಿ ಶುಭಲಕ್ಷ್ಮಿ ಪಾನ್ಸೆ - ಕಾರ್ಯಕಾರಿ ನಿರ್ದೇಶಕರು  
3. ಶ್ರೀಮತಿ ಸುಮ ವರ್ಮ 
4. ಶ್ರೀ  ಪ್ರಕಾಶ್ ಚಂದ್ರ ನಲ್ವಾಯ       
5. ಶ್ರೀ  ನಿಶಾಂಕ್ ಕುಮಾರ್ ಜೈನ್  
6. ಶ್ರೀಮತಿ ಭಾರತಿ ರಾವ್
7. ಶ್ರೀ ಪಿ. ವೈದ್ಯನಾಥನ್

ಲೆಕ್ಕ ಪತ್ರ ಕಮಿಟಿ

1. ಶ್ರೀ  ಪ್ರಕಾಶ್ ಚಂದ್ರ ನಲ್ವಾಯ   (ಸಮಿತಿಯ ಅಧ್ಯಕ್ಷರು)
2. ಶ್ರೀಮತಿ ಶುಭಲಕ್ಷ್ಮಿ ಪಾನ್ಸೆ - ಕಾರ್ಯಕಾರಿ ನಿರ್ದೇಶಕರು
3.  ಶ್ರೀ. ವಿ. ಕೆ. ಚೋಪ್ರಾ
4. ಶ್ರೀಮತಿ ಸುಮ ವರ್ಮ
5. ಶ್ರೀ ಬಿ. ಇಬ್ರಾಹಿಮ್

ನಿರ್ದೇಶಕರ ಪದೋನ್ನತಿ ಸಮಿತಿ 1. ಶ್ರೀ ಎಚ್.ಎಸ್. ಉಪೇಂದ್ರ ಕಾಮತ್   (ಸಮಿತಿಯ ಅಧ್ಯಕ್ಷರು)
2. ಶ್ರೀಮತಿ ಶುಭಲಕ್ಷ್ಮಿ ಪಾನ್ಸೆ - ಕಾರ್ಯಕಾರಿ ನಿರ್ದೇಶಕರು
3. ಶ್ರೀ. ವಿ. ಕೆ. ಚೋಪ್ರಾ
4. ಶ್ರೀಮತಿ ಸುಮ ವರ್ಮ
ನಷ್ಟ ನಿರ್ವಹಣೆ ಸಮಿತಿ

1. ಶ್ರೀ  ಎಚ್.ಎಸ್. ಉಪೇಂದ್ರ ಕಾಮತ್    (ಸಮಿತಿಯ ಅಧ್ಯಕ್ಷರು)
2. ಶ್ರೀಮತಿ ಶುಭಲಕ್ಷ್ಮಿ ಪಾನ್ಸೆ  - ಕಾರ್ಯಕಾರಿ ನಿರ್ದೇಶಕರು
3. ಶ್ರೀಮತಿ ಭಾರತಿ ರಾವ್
4. ಶ್ರೀ ಪಿ. ವೈದ್ಯನಾಥನ್ 
5. ಶ್ರೀ. ಸುರೇಶ್ ಕಾಮತ್

ರೂ. 1 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ವಂಚನೆ ಪ್ರಕರಣಗಳನ್ನು ಪರಿಶೀಲಿಸಲು ವಿಶೇಷ ಸಮಿತಿ 1. ಶ್ರೀ  ಎಚ್.ಎಸ್. ಉಪೇಂದ್ರ ಕಾಮತ್    (ಸಮಿತಿಯ ಅಧ್ಯಕ್ಷರು)
2. ಶ್ರೀಮತಿ ಶುಭಲಕ್ಷ್ಮಿ ಪಾನ್ಸೆ - ಕಾರ್ಯಕಾರಿ ನಿರ್ದೇಶಕರು
3. ಶ್ರೀ ಪಿ. ವೈದ್ಯನಾಥನ್
4. ಶ್ರೀ ನಿಶಾಂಕ್ ಕುಮಾರ್ ಜೈನ್
5. ಶ್ರೀಮತಿ ಭಾರತಿ ರಾವ್
ಷೇರುದಾರರ ಮತ್ತು ಹೂಡಿಕೆದಾರರ ಕುಂದುಕೊರತೆ ಸಮಿತಿ  1. ಶ್ರೀ. ಪಿ.  ವೈದ್ಯನಾಥನ್  (ಸಮಿತಿಯ ಅಧ್ಯಕ್ಷರು) 
2. ಶ್ರೀಮತಿ ಶುಭಲಕ್ಷ್ಮಿ ಪಾನ್ಸೆ  - ಕಾರ್ಯಕಾರಿ ನಿರ್ದೇಶಕರು
3. ಶ್ರೀ ಬಿ. ಇಬ್ರಾಹಿಮ್ 
4.  ಶ್ರೀಮತಿ ಭಾರತಿ ರಾವ್
5.  ಶ್ರೀ ನಿಶಾಂಕ್ ಕುಮಾರ್ ಜೈನ್
ಷೇರು ವರ್ಗಾವಣೆ ಸಮಿತಿ

1. ಶ್ರೀ ಎಚ್.ಎಸ್. ಉಪೇಂದ್ರ ಕಾಮತ್   (ಸಮಿತಿಯ ಅಧ್ಯಕ್ಷರು; ಇವರ ಗೈರು ಹಾಜರಿಯಲ್ಲಿ ಕಾರ್ಯಕಾರಿ ನಿರ್ದೇಶಕರು)
2. ಶ್ರೀ. ಸುರೇಶ್ ಕಾಮತ್
3. ಶ್ರೀ ನಿಶಾಂಕ್ ಕುಮಾರ್ ಜೈನ್

ಗ್ರಾಹಕ ಸೇವೆಗಳ ಸಮಿತಿ

1. ಶ್ರೀ ಎಚ್.ಎಸ್. ಉಪೇಂದ್ರ ಕಾಮತ್   (ಸಮಿತಿಯ ಅಧ್ಯಕ್ಷರು)
2. ಶ್ರೀಮತಿ ಶುಭಲಕ್ಷ್ಮಿ ಪಾನ್ಸೆ - ಕಾರ್ಯಕಾರಿ ನಿರ್ದೇಶಕರು
3. ಶ್ರೀ ಟಿ.ರುದ್ರಪ್ಪ   - ಗ್ರಾಹಕರನ್ನು ಪ್ರತಿನಿಧಿಸುವ ಸದಸ್ಯರು
4. ಶ್ರೀ ಬಿ. ಇಬ್ರಾಹಿಮ್
5. ಶ್ರೀ. ಸುರೇಶ್ ಕಾಮತ್

ಸಂಭಾವನೆ ಸಮಿತಿ 1. ಶ್ರೀ. ವಿ. ಕೆ. ಚೋಪ್ರಾ, ಸಮಿತಿಯ ಅಧ್ಯಕ್ಷರು)
2. ಶ್ರೀಮತಿ ಸುಮ ವರ್ಮ
3. ಶ್ರೀ ಬಿ. ಇಬ್ರಾಹಿಮ್
ನಾಮಕರಣ ಸಮಿತಿ

1. ಶ್ರೀ. ವಿ. ಕೆ. ಚೋಪ್ರಾ (ಸಮಿತಿಯ ಅಧ್ಯಕ್ಷರು)
2. ಶ್ರೀ ಬಿ. ಇಬ್ರಾಹಿಮ್
3. ಶ್ರೀ ಪ್ರಕಾಶ್ ಚಂದ್ರ ನಲ್ವಾಯ

ಸಿಎಮ್‍ಡಿಯು ಶಿಸ್ತು ಸಮಿತಿಯಲ್ಲಿದ್ದಾಗ ನೌಕರರು ಬಯಸುವ ಅಪೀಲುಗಳನ್ನು ತೀರ್ಮಾನಿಸುವ ಸಮಿತಿ 1. ಶ್ರೀ. ವಿ. ಕೆ. ಚೋಪ್ರಾ
2. ಶ್ರೀಮತಿ ಸುಮ ವರ್ಮ
3. ಶ್ರೀ ಪ್ರಕಾಶ್ ಚಂದ್ರ ನಲ್ವಾಯ

ಹಂಚಿಕೆ ಸಮಿತಿ


1. ಶ್ರೀಮತಿ ಶುಭಲಕ್ಷ್ಮಿ ಪಾನ್ಸೆ
2. ಶ್ರೀ ರಂಜನ್ ಶೆಟ್ಟಿ
3. ಶ್ರೀ ಬಿ. ಇಬ್ರಾಹಿಮ್
 
ಮಂಡಲಿಯ ವ್ಯವಸ್ಥಾಪಕ ಸಮಿತಿ 

ವಸ್ತು ಪ್ರಾಮುಖ್ಯತೆಯನ್ನು ಹೊಂದಿರುವ ಅಂದರೆ, ಮಿತಿಗಳನ್ನು ಮಂಜೂರು ಮಾಡುವಾಗ ಅಧ್ಯಕ್ಷರು ಮತ್ತು ಕಾರ್ಯಕಾರಿ ನಿರ್ದೇಶಕರಿಗೆ ಎರಡು ಪಟ್ಟು ಮಿತಿಯಿರುವ ನಿಧಿ ಆಧಾರಿತ ಮತ್ತು ನಿಧಿಯೇತರಗಳ ಬಗ್ಗೆ ಒಪ್ಪಂದಕ್ಕೆ ಬರಲು/ವಜಾ ಮಾಡಲು, ಬಂಡವಾಳ ಮತ್ತು ಕಂದಾಯದ ಖರ್ಚನ್ನು, ಕಟ್ಟಡಗಳ ಆವರಣಗಳನ್ನು, ಹೂಡಿಕೆಗಳನ್ನು, ದಾನಗಳೇ ಮೊದಲಾದ ಮಂಜೂರು ಮಾಡುವ ವಿವಿಧ ವ್ಯವಹಾರಿಕ ವಿಷಯಗಳನ್ನು ಪರಿಗಣಿಸಲು ಈ ಮಂಡಲಿಯ ವ್ಯವಸ್ಥಾಪಕ ಸಮಿತಿಯು ರಚಿತವಾಗಿದೆ. ಈ ಸಮಿತಿಗೆ ಮಂಡಲಿಯು ಕೇಂದ್ರ ಸರ್ಕಾರ ಮತ್ತು ಆರ್.ಬಿ.ಐ.ಗಳ ಸಹಯೋಗದ ಒಪ್ಪಿಗೆಯೊಂದಿಗೆ ನೀಡಲಾದ ಅಧಿಕಾರಗಳನ್ನು ಚಲಾಯಿಸಬಹುದು. ವ್ಯವಸ್ಥಾಪಕ ಸಮಿತಿಯು ಈ ಕೆಳಗಿನ ನಿರ್ದೇಶಕರುಗಳನ್ನು ಸದಸ್ಯರನ್ನಾಗಿ ಹೊಂದಿರುತ್ತದೆ:-

 1. ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು
 2. ಕಾರ್ಯಕಾರಿ ನಿರ್ದೇಶಕರು
 3. ಸಿ.ಎ. ಗುಂಪಿನಲ್ಲಿ ನೇಮಕವಾದ ಅಧಿಕಾರಿಯೇತರ ನಿರ್ದೇಶಕರು [ ಶಾಶ್ವತ ಸದಸ್ಯರು ]
 4. ಮೂರು ಜನ ಅಧಿಕಾರಿಯೇತರ ನಿರ್ದೇಶಕರು-ಒಬ್ಬೊಬ್ಬರೂ ಆವರ್ತನೆಯ ಆಧಾರದ ಮೇಲೆ 6 ತಿಂಗಳುಗಳ ಅವಧಿಗೆ.
 
ಮಂಡಲಿಯ ಆಯವ್ಯಯ ಸಮಿತಿ (ಎ.ಸಿ.ಬಿ)

ಎಸಿಬಿಯು ಬ್ಯಾಂಕಿನ ಒಟ್ಟಾರೆ ಆಯವ್ಯಯದ ವ್ಯವಸ್ಥೆಗೆ ನಿರ್ದೇಶನ ನೀಡುವುದಲ್ಲದೆ ಅದರ ಕಾರ್ಯಾಚರಣೆ ಮೇಲೆ ನಿಗಾ ವಹಿಸುತ್ತದೆ. ಆಂತರಿಕ ಆಯವ್ಯಯದ ವ್ಯವಸ್ಥೆ ಮತ್ತು ಗುಣಮಟ್ಟ ನಿಭಾಯಿಸುವುದು ಮತ್ತು ಬ್ಯಾಂಕಿನ ಒಳಗೆ ಪರಿಶೋಧನೆಗಳನ್ನು ಮಾಡುವುದು, ಬ್ಯಾಂಕಿನ ಕಾನೂನು ಸಮ್ಮತ/ಬಾಹ್ಯ ಆಯವ್ಯಯ ಪರಿಶೀಲನೆ ಹಾಗು ಆರ್.ಬಿ.ಐ.ನ ಪರಿಶೋಧನೆಗಳನ್ನು ಅನುಧಾವಿಸುವ ಕರ್ತವ್ಯಗಳನ್ನು ಸಮಿತಿಯು ನಿಭಾಯಿಸುತ್ತದೆ. ಸಮಿತಿಯು ಈ ಕೆಳಗಿನ ವಿಷಯಗಳ ಬಗ್ಗೆ ವಿಶೇಷವಾಗಿ ಗಮನ ಹರಿಸುತ್ತದೆ

 1. ಅಂತರ ಶಾಖೆ ಹೊಂದಾಣಿಕೆ ಖಾತೆಗಳು
 2. ದೀರ್ಘ ಕಾಲದಿಂದ ತೀರ್ಮಾನವಾಗದೆ ಉಳಿದ ಅಂತರ ಶಾಖೆ ಖಾತೆಗಳು ಮತ್ತು ನಾಸ್ಟ್ರೋ ಖಾತೆಗಳು
 3. ವಿವಿಧ ಶಾಖೆಗಳ ವಹಿಗಳ ಹೊಂದಾಣಿಕೆಯಲ್ಲಿ ಉಳಿಕೆಗಳು
 4. ವಂಚನೆಗಳು
 5. ಗೃಹಕೃತ್ಯದ ಮುಖ್ಯ ಕ್ಷೇತ್ರಗಳು ಮಂಡಲಿಯ ಆಯವ್ಯಯ ಸಮಿತಿಯು 5 ಜನ ನಿರ್ದೇಶಕರು, ಜೊತೆಗೆ ಹಣಕಾಸಿನ ಜ್ಞಾನವಿರುವ ಸಮಿತಿಯ ನಿರ್ದೇಶಕರಾಗಿ ಕಾರ್ಯಕಾರೇತರ ಸ್ವತಂತ್ರ ನಿರ್ದೇಶಕರನ್ನು ಒಳಗೊಂಡಿರುತ್ತದೆ.

ಆಯವ್ಯಯ ಸಮಿತಿ ಮಂಡಲಿ

ಸಮಿತಿಯು ಕೆಳಗಿನ ನಿರ್ದೇಶಕರನ್ನು ಒಳಗೊಂಡಿರುತ್ತದೆ :-  

1.  ಶ್ರೀ ಪ್ರಕಾಶ್ ಚಂದ್ರ ನಲ್ವಾಯ- ಸಮಿತಿಯ ಅಧ್ಯಕ್ಷರು.
2.  ಕಾರ್ಯಕಾರಿ ನಿರ್ದೇಶಕರು - ಸದಸ್ಯರು
3.  ಸರ್ಕಾರಿ ನಾಮಕರಣಿತ ನಿರ್ದೇಶಕರು - ಸದಸ್ಯರು
4.  ಆರ್.ಬಿ.ಐ. ನಾಮಕರಣಿತ ನಿರ್ದೇಶಕರು  - ಸದಸ್ಯರು
5.  ಒಬ್ಬ ಅಧಿಕಾರಿಯೇತರ ನಿರ್ದೇಶಕರು - ಸದಸ್ಯರು

 
ಆಯವ್ಯಯ ಸಮಿತಿಗೆ ಈ ಕೆಳಗಿನ ಕರ್ತವ್ಯಗಳಿರುತ್ತವೆ:-
 • ಬ್ಯಾಂಕಿನ ಹಣಕಾಸು ಸಂಬಂಧಿತವಾಗಿ ವರದಿ ಮಾಡುವ ಪ್ರಕ್ರಿಯೆಯನ್ನು ನೋಡಿಕೊಳ್ಳುವುದು ಮತ್ತು ಅದು ಸರಿಯಾಗಿದೆ, ಸಮರ್ಪಕವಾಗಿದೆ ಮತ್ತು ಹಣಕಾಸಿನ ಮಾಹಿತಿಯ ನಂಬಿಕರ್ಹ ಪ್ರಕಟಣೆಯಾಗಿದೆ ಎಂದು ಖಾತರಿಪಡಿಸಿಕೊಳ್ಳುವುದು.
 • ವ್ಯವಸ್ಥಾಪಕ ಮಂಡಲಿಯೊಂದಿಗೆ, ಕಾರ್ಯನೀತಿಗಳು ಮತ್ತು ಕಾರ್ಯವೈಖರಿಗಳ ಬಗ್ಗೆ ವಿಶೇಷ ಗಮನ ನೀಡಿ, ಹಣಕಾಸಿನ ಲೆಕ್ಕಪಟ್ಟಿಗಳನ್ನು, ಲೆಕ್ಕ ನಿರ್ವಹಣೆಯ ಗುಣಮಟ್ಟಗಳನ್ನು ಮತ್ತು ಹಣಕಾಸು ಲೆಕ್ಕಪಟ್ಟಿಗಳಿಗೆ ಸಂಬಂಧಿಸಿದ ಇತರ ಕಾನೂನು ಅವಶ್ಯಕತೆಗಳನ್ನು, ಆಯವ್ಯಯ ವರದಿಯಲ್ಲಿ ಅರ್ಹವಾಗಿದೆಯೆ, ಸ್ಟಾಕ್ ವಿನಿಮಯ ಕೇಂದ್ರದ ಸೂಚನೆಗಳು ಮತ್ತು ಹಣಕಾಸು ಸಂಸ್ಥೆಗೆ ಸಂಬಂಧಿಸಿದಂತೆ ಕಾನೂನುಬದ್ಧವಾಗಿದೆಯೆ, ಸಂಬಂಧಿಸಿದ ವ್ಯಕ್ತಿಯ ವಹಿವಾಟಿಗೆ ಸಂಬಂಧಿಸಿದಂತೆ, ಇತರೆ ವಿಷಯಗಳನ್ನು ಪರಿಶೀಲಿಸುವುದು.
 • ವಂಚನೆಯ ಶಂಕೆ ಬಂದಿರುವ ವಿಷಯಗಳಲ್ಲಿ ಅಥಾವ ವ್ಯತ್ಯಯ ಅಥಾವ ಆಂತರಿಕ ಅಧೀನ ವ್ಯವಸ್ಥೆಯಲ್ಲಿನ ಲೋಪ ಗಮನಕ್ಕೆ ಬಂದಾಗ ಆಂತರಿಕ ಲೆಕ್ಕಪತ್ರ ಪರಿಶೋಧಕರ ನಿರ್ಣಯಗಳನ್ನು ಪರಿಶೀಲಿಸುವುದು ಮತ್ತು ಅಧೀನ ಯಂತ್ರದ ಬಲವರ್ಧನೆಗೆ ಸಲಹೆಗಳನ್ನು ನೀಡುವುದು.
 • ವಾರ್ಷಿಕ/ಅರ್ಧವಾರ್ಷಿಕ ಮತ್ತು ಕಾಲುವರ್ಷದ ಲೆಕ್ಕಗಳು ಮತ್ತು ವರದಿಗಳು ಅಂತಿಮಗೊಳ್ಳುವ ಮುಂಚೆ ಕಾನೂನು ಬದ್ಧ ಕೇಂದ್ರೀಯ ಲೆಕ್ಕಪರಿಶೋಧಕರ ಜೊತೆ, ಲೆಕ್ಕಪತ್ರ ನಿರ್ವಹಣೆಯ ಕಾರ್ಯನೀತಿಗಳನ್ನು ಮತ್ತು ಕಚ್ಚಾ ಲೆಕ್ಕ ಪತ್ರವರದಿಯನ್ನು ಗಮನದಲ್ಲಿಟ್ಟುಕೊಂಡು ಚರ್ಚಿಸುವುದು..
 • ಠೇವಣಿದಾರರು, ಷೇರುದಾರರು, ಋಣ ಸಂಚಯಗಳನ್ನು ಹೊಂದಿರುವವರು ಮತ್ತು ಸಾಲಗಾರರಿಗೆ ಮಾಡುವ ಮಹತ್ವವುಳ್ಳ ಕರ್ತವ್ಯ ಲೋಪಗಳೇನಾದರೂ ಇದ್ದರೆ ಅವುಗಳ ಕಾರಣಗಳನ್ನು ಪರಿಶೀಲಿಸುವುದು.    
 
ಷೇರುದಾರರು/ಹೂಡಿಕೆದಾರರ ಕುಂದುಕೊರತೆಗಳ ಸಮಿತಿ      

ಬ್ಯಾಂಕು, ಷೇರುದಾರರು/ಹೂಡಿಕೆದಾರರ ಕುಂದುಕೊರತೆಗಳ ಸಮಿತಿಯನ್ನು ಷೇರುದಾರರು ಮತ್ತು ಹೂಡಿಕೆದಾರರ ಅವರಿಗೆ ಸಂಬಂಧಿಸಿದ ದೂರುಗಳಿಗೆ ಪರಿಹಾರವನ್ನು ನೀಡುವ ಉದ್ದೇಶದಿಂದ ಕೆಳಗಿನ ನಾಮಕರಣಿಗಳನ್ನು ಸಮಿತಿಯ ಸದಸ್ಯರನ್ನಾಗಿಸಿ ಸ್ಥಾಪಿಸಿದೆ.

 • ಷೇರುದಾರ ನಿರ್ದೇಶಕರು … ಸಮಿತಿಯ ಅಧ್ಯಕ್ಷರು
 • ಕಾರ್ಯಕಾರಿ ನಿರ್ದೇಶಕರು - ಸದಸ್ಯರು
 • ಷೇರುದಾರ ನಾಮಕರಣಿತ ನಿರ್ದೇಶಕರು - ಸದಸ್ಯರು
 • ಷೇರುದಾರ ನಾಮಕರಣಿತ ನಿರ್ದೇಶಕರು - ಸದಸ್ಯರು    
 
ಷೇರು ವರ್ಗಾವಣೆ ಸಮಿತಿ  

ಬ್ಯಾಂಕು, ಅಧ್ಯಕ್ಷರ ಹಾಗು ನಿರ್ದೇಶಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಅಥಾವ ಕಾರ್ಯಕಾರಿ ನಿರ್ದೇಶಕರು (ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಗೈರು ಹಾಜರಿಯಲ್ಲಿ) ಮತ್ತು ಒಬ್ಬ ಷೇರುದಾರರು, ನಾಮಕರಣಿತ ನಿರ್ದೇಶಕರು ಮತ್ತು ಒಬ್ಬ ಅಧಿಕಾರಿಯೇತರ ನಿರ್ದೇಶಕರನ್ನು ತನ್ನ ಸದಸ್ಯರನ್ನಾಗಿಸಿಕೊಂಡು ಷೇರು ವರ್ಗಾವಣೆ ಸಮಿತಿಯನ್ನು ಸ್ಥಾಪಿಸಿದೆ. ಈ ಸಮಿತಿಯು 15 ದಿನಗಳಿಗೊಮ್ಮೆ ಷೇರುಗಳ ತ್ವರಿತ ವರ್ಗಾವಣೆಯು ಕಾರ್ಯರೂಪಕ್ಕೆ ಬರುವಂತೆ ಮಾಡುವ ಉದ್ದೇಶದಿಂದ ಸಭೆ ಸೇರುತ್ತಾರೆ. 

 
ನಷ್ಟ ನಿರ್ವಹಣಾ ಸಮಿತಿ  

ನಷ್ಟ ನಿರ್ವಹಣೆಯ ಕಾರ್ಯಸೂಚಿಗಳನ್ನು ಮತ್ತು ಬ್ಯಾಂಕಿನಲ್ಲಿ ಸಂಕಲಿತ ನಷ್ಟ ನಿರ್ವಹಣೆಗಾಗಿ ತಂತ್ರಗಳನ್ನು ರೂಪಿಸಲು ಬ್ಯಾಂಕು ನಷ್ಟ ನಿರ್ವಹಣಾ ಸಮಿತಿಯನ್ನು ಸ್ಥಾಪಿಸಿದೆ. ಮಂಡಲಿಯ ವ್ಯವಸ್ಥಾಪಕ ಸಮಿತಿಯಲ್ಲಿ ಈ ಕೆಳಗಿನ ಸದಸ್ಯರಿರುತ್ತಾರೆ:-

 1. ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು
 2. ಕಾರ್ಯಕಾರಿ ನಿರ್ದೇಶಕರು
 3. ಮೂವರು ನಿರ್ದೇಶಕರು [ ಅಧಿಕಾರಿಯೇತರ / ಷೇರುದಾರ ನಿರ್ದೇಶಕರು ] 
 
ವಂಚನೆ ಪ್ರಕರಣಗಳನ್ನು ಪರಿಶೀಲಿಸಲು ಸಮಿತಿ  

ರೂ.1 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ವಂಚನೆಗಳಿಗೆ ಆದ್ಯಗಮನವನ್ನು ನೀಡುವ ದೃಷ್ಠಿಯಿಂದ, ಆರ್.ಬಿ.ಐ. ನ ಕಾರ್ಯಸೂಚಿಗಳಿಗೆ ಅನುಗುಣವಾಗಿ, ಬೃಹತ್ ಮೊತ್ತದ ವಂಚನೆಗಳನ್ನು ಪರಿಶೀಲಿಸುವ ಮಂಡಲಿಯ ಸಮಿತಿಯನ್ನು ಸ್ಥಾಪಿಸಲಾಗಿದೆ. ಸಮಿತಿಯು ಈ ಕೆಳಗಿನ ನಿರ್ದೇಶಕರನ್ನು ಹೊಂದಿರುತ್ತದೆ :-  

 1. ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು
 2. ಕಾರ್ಯಕಾರಿ ನಿರ್ದೇಶಕರು
 3. ಮೂವರು ನಿರ್ದೇಶಕರು [ ಅಧಿಕಾರಿಯೇತರ / ಷೇರುದಾರ ನಿರ್ದೇಶಕರು ] 
ಗ್ರಾಹಕ ಸೇವಾ ಸಮಿತಿ  

ಆರ್.ಬಿ.ಐ.ನ ನಿಬಂಧನೆಗಳಿಗೆ ಅನುಗುಣವಾಗಿ, ಕೆಳಗಿನ ನಿರ್ದೇಶಕರನ್ನು ಸದಸ್ಯರಾಗಿ ಹೊಂದಿದ ಗ್ರಾಹಕ ಸೇವಾ ಸಮಿತಿಯನ್ನು ಸ್ಥಾಪಿಸಲಾಗಿದೆ:-  

 1. ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಸಮಿತಿಯ ಅಧ್ಯಕ್ಷರು.
 2. ಕಾರ್ಯಕಾರಿ ನಿರ್ದೇಶಕರು. - ಸದಸ್ಯರು
 3. ಆರ್.ಬಿ.ಐ. ನಾಮಕರಣಿತ ನಿರ್ದೇಶಕರು. - ಸದಸ್ಯರು
 4. ಒಬ್ಬರು ನಾಮಕರಣಿತ ನಿರ್ದೇಶಕರು. - ಸದಸ್ಯರು
 5. ಶ್ರೀ ಟಿ.ರುದ್ರಪ್ಪ, (ಗ್ರಾಹಕರ ಪ್ರತಿನಿಧಿ). - ಸದಸ್ಯರು
ವಿಜಯಾ ಬ್ಯಾಂಕಿನ (ಷೇರುಗಳು ಮತ್ತು ಸಭೆಗಳು) ವಿಧಿ 2003 ರ 67ನೇ ವಿಧಿಯ ಅಡಿಯಲ್ಲಿ ಚುನಾವಣಾ ವ್ಯಾಜ್ಯಗಳನ್ನು ಬಗೆಹರಿಸುವ ಸಮಿತಿ

      1.  ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು
2. ಸರ್ಕಾರಿ ನಾಮಕರಣಿತ ನಿರ್ದೇಶಕರು
3. ಆರ್.ಬಿ.ಐ. ನಾಮಕರಣಿತ ನಿರ್ದೇಶಕರು

 
ನಿರ್ದೇಶಕರ ಪದೋನ್ನತಿ ಸಮಿತಿ  

ವಿಜಯಾ ಬ್ಯಾಂಕಿನ (ಅಧಿಕಾರಿಗಳ) ಸೇವಾ ವಿಧಿ 1982ರ ವಿಧಿ 19(2)ರ ನಿಯಮಗಳಿಗೆ ಅನುಗುಣವಾಗಿ, ಎಸ್.ಎಮ್.ಜಿ ವೇತನ 5 ಮತ್ತು ಅದಕ್ಕಿಂತ ಮೇಲಿನ ಅಧಿಕಾರಗಳಲ್ಲಿರುವ ಕಾರ್ಯನಿರ್ವಾಹಕರ ಪ್ರಕರಣಗಳನ್ನು ಪರಿಶೀಲಿಸಲು ಒಂದು ವಿಶೇಷ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಶಿಸ್ತಿಗೆ ಸಂಬಂಧಿಸಿದ ಪ್ರಕರಣಗಳು ಮತ್ತು ಬ್ಯಾಂಕಿನ ಉನ್ನತ ಮಟ್ಟದ ಕಾರ್ಯನಿರ್ವಾಹಕರ (ವೇತನ ಶ್ರೇಣಿ7) ಪದೋನ್ನತಿಗೆ ಸಂಬಂಧಿಸಿದ ಪ್ರಕರಣಗಳನ್ನು ಪರಿಶೀಲಿಸುತ್ತದೆ. 55 ವರ್ಷಗಳು ಪೂರ್ಣಗೊಂಡ ವಯಸ್ಸಿಗೆ ಅಥವ ಒಟ್ಟು ಸೇವೆಯು 30ವರ್ಷಗಳನ್ನು ಪೂರೈಸಿದ ನಂತರ ಯಾವುದೇ ಸಮಯದಲ್ಲಿ ಅಧಿಕಾರಿ ನೌಕರರ ಪರಿಶೀಲನೆ ಮತ್ತು ನಿವ್ರುತ್ತಿಯನ್ನು ಪರಿಶೀಲಿಸಲೆಂದು ಈ ಸಮಿತಿಯನ್ನು ಸ್ಥಾಪಿಸಲಾಗಿತ್ತು. ಈ ಸಮಿತಿಯಲ್ಲಿ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕಾರ್ಯಕಾರಿ ನಿರ್ದೇಶಕರು, ಸರ್ಕಾರಿ ನಿರ್ದೇಶಕರು ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶಕರನ್ನು ಒಳಗೊಂಡಿದೆ. 

ಸಂಭಾವನೆ ಸಮಿತಿ   

ಭಾರತ ಸರ್ಕಾರದ 9.3.2007ರ ಕಾರ್ಯಸೂಚಿಯ ಅನ್ವಯ ಈ ಸಮಿತಿಯನ್ನು ರೂಪಿಸಲಾಯಿತು. ಎಲ್ಲ ಕಾಲದ ನಿರ್ದೇಶಕರ (ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಾರ್ಯಕಾರಿ ನಿರ್ದೇಶಕರು) ಕಾರ್ಯ ನಿರ್ವಹಣೆಯ ಮೌಲ್ಯ ಮಾಪನ ಲೆಕ್ಕಕಾಗಿ ಇದನ್ನು ಆರಂಭಿಸಲಾಯಿತು. ಈ ಸಮಿತಯಲ್ಲಿ ಸರ್ಕಾರಿ ನಾಮಕರಣಿತ ನಿರ್ದೇಶಕರು, ಆರ್.ಬಿ.ಐ. ನಾಮಕರಣಿತ ನಿರ್ದೇಶಕರು, ಸನ್ನದು ಲೆಕ್ಕಿಗರ ಶ್ರೇಣಿಯಡಿಯಲ್ಲಿ ನೇಮಕವಾದ ಅಧಿಕಾರಿಯೇತರ ನಿರ್ದೇಶಕರು ಮತ್ತು ಒಬ್ಬ ಅಧಿಕಾರಿಯೇತರ / ಷೇರುದಾರ ನಿರ್ದೇಶಕರು. 

 
ನಾಮಕರಣ ಸಮಿತಿ
ಈ ಮಂಡಲಿಯು ಹಾಲಿ ಚುನಾಯಿತ ನಿರ್ದೇಶಕರು ಮತ್ತು ಪರಿಚ್ಛೇದ 9(3)ರ ಅಡಿಯಲ್ಲಿ ಚುನಾಯಿತರಾಗಿ ನಿರ್ದೇಶಕರಾಗಲಿರುವ ವ್ಯಕ್ತಿಗಳ, ’ಸಮರ್ಥ ಮತ್ತು ಸೂಕ್ತ’ ಸ್ಥಿತಿಯನ್ನು ನಿರ್ಧರಿಸಲು ಸ್ಥಾಪಿತವಾಯಿತು. ಈ ಸಮಿತಿಯಲ್ಲಿ ಸರ್ಕಾರಿ ನಾಮಕರಣಿತ ನಿರ್ದೇಶಕರು, ಆರ್.ಬಿ.ಐ. ನಾಮಕರಣಿತ ನಿರ್ದೇಶಕರು, ಸನ್ನದು ಲೆಕ್ಕಿಗರ ಶ್ರೇಣಿಯಡಿಯಲ್ಲಿ ನೇಮಕವಾದ ಅಧಿಕಾರಿಯೇತರ ನಿರ್ದೇಶಕರನ್ನು ಒಳಗೊಂಡಿರುತ್ತದೆ.
ಚುನಾವಣಾ ವ್ಯಾಜ್ಯಗಳನ್ನು ಬಗೆಹರಿಸುವ ಸಮಿತಿ
ಈ ಸಮಿತಿಯು ವಿಜಯಾ ಬ್ಯಾಂಕಿನ(ಷೇರುಗಳು ಮತ್ತು ಸಭೆಗಳು) ವಿಧಿ 2003ರ ಕಾರ್ಯಸೂಚಿ 67 ರ ಅನ್ವಯ ಚುನಾವಣಾ ವ್ಯಾಜ್ಯಗಳನ್ನು ಬಗಹರಿಸಲು ಇರುವಂಥದ್ದಾಗಿದೆ.

 

ಸಿ.ಎಮ್.ಡಿ.ಯು ಶಿಸ್ತುಕ್ರಮದ ಅಧಿಕಾರಿಯಾಗಿರುವಲ್ಲಿ, ನೌಕರರ ಅಪೀಲುಗಳನ್ನು ಬಗೆಹರಿಸಲ ಇರುವ ಸಮಿತಿ ಇದಾಗಿದೆ

1. ಶ್ರೀ. ವಿ. ಕೆ. ಚೋಪ್ರಾ
2. ಶ್ರೀಮತಿ ಸುಮ ವರ್ಮ

ಹಂಚಿಕೆ ಸಮಿತಿ

1. ಶ್ರೀಮತಿ ಶುಭಲಕ್ಷ್ಮಿ ಪಾನ್ಸೆ
2. ಶ್ರೀ ರಂಜನ್ ಶೆಟ್ಟಿ
3. ಶ್ರೀ ಬಿ. ಇಬ್ರಾಹಿಮ್
 
ಸೂಚನೆ
ನಿರ್ದೇಶಕರ ಮಂಡಲಿಯ ಅಥಾವ ಸಮಿತಿಯ ಯಾವುದೇ ಸಭೆಗಳಿಗೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ ಹಾಗು ಅಂಥ ಸಭೆಗಳ ನಡಾವಳಿಗಳೂ ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ.
 
ವಿಷಯದ ಸಂ. ಅನುಕೂಲ ವಿವರಗಳು
4.1 ಬಿ (ix) ಅಧಿಕಾರಿಗಳ ಮತ್ತು ನೌಕರರ ಒಂದು ನಿರ್ದೇಶಿಕೆ

ನೌಕರರ ಸಂಖ್ಯೆಯು ಸ್ವಲ್ಪ ಹೆಚ್ಚೇ ಇರುವುದರಿಂದ ಮತ್ತು ಅವರು ವರ್ಗಾವಣೆಯಾಗವಂಥವರಾಗಿರುವ ಕಾರಣದಿಂದ ಅಧಿಕಾರಿಗಳು ಮತ್ತು ನೌಕರರ ಪಟ್ಟಿಯನ್ನು ಪ್ರಕಟಿಸಲು/ ಅದನ್ನು ಕಾಲಕಾಲಕ್ಕೆ ಪರಿಷ್ಕರಿಸಲು ಸಾಧ್ಯವಿರುವುದಿಲ್ಲ. ಯಾವುದೇ ವ್ಯಕ್ತಿಗೆ ಬ್ಯಾಂಕಿನ ಯಾವುದಾದರೂ ಅಧಿಕಾರಿಯ ಅಥಾವ ನೌಕರನ ಬಗ್ಗೆ ಮಾಹಿತಿ ಪಡೆಯಲು ಬಯಸಿದರೆ ಅವರು ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು/ಸಹ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ಪ್ರಾಂತೀಯ/ಮುಖ್ಯ ಕಚೇರಿಯ ಮಟ್ಟದಲ್ಲಿ ಭೇಟಿ ಮಾಡಬಹುದು.

4.1 ಬಿ (x) ತನ್ನ ಕಾರ್ಯಸೂಚಿಯಲ್ಲಿ ಇರುವಂತೆ ಸಂವನಾ ವ್ಯವಸ್ಥೆಯೂ ಸೇರಿದಂತೆ ತನ್ನ ಪ್ರತಿಯೊಬ್ಬ ಅಧಿಕಾರಿಗಳ ಮತ್ತು ನೌಕರರು ಪಡೆಯುವ ಮಾಸಿಕ ಸಂಭಾವನೆ. ನೌಕರರು/ಅಧಿಕಾರಿಗಳ ವೇತನ ಶ್ರೇಣಿಗಳು ಈ ಕೆಳಗಿನಂತೆ ಇರುತ್ತವೆ:-
ಅಧೀನ ಸಿಬ್ಬಂದಿ
4060 105 4270 115 4500 135 4770 165
2 2 2 3
5265 195 6045 235 6750 270 7560  
4 3 3
ಗುಮಾಸ್ತ ಸಿಬ್ಬಂದಿ
4410 215 5055 335 6060 470 7940 500
3 3 4 3
9440 560 11680 970 12650 560 13210  
4 1 1
ಅಧಿಕಾರಿಗಳು/ಕಾರ್ಯಕಾರಿ ಅಧಿಕಾರಿಗಳ ವೇತನ ಶ್ರೇಣಿ I – ರೂ.10000-470/6-12820-500/3-14320-560/7-18240 ವೇತನ ಶ್ರೇಣಿ II- ರೂ.13820-500/1-14320- 560/10-19920 ವೇತನ ಶ್ರೇಣಿ III-ರೂ.18240-560/5-21040-620/2-22280 ವೇತನ ಶ್ರೇಣಿ IV-ರೂ.20480-560/1-21040-620/5-24140  
 
ವಿಷಯದ ಸಂ. ಅನುಕೂಲ ವಿವರಗಳು
4.1 ಬಿ (xi) ಎಲ್ಲ ಯೋಜನೆಗಳ ವಿವರಗಳನ್ನು ಸೂಚಿಸುವ, ಯೋಜಿತ ಖರ್ಚುಗಳು ಮತ್ತು ಮಾಡಲಾದ ಬಟವಾಡೆಗಳ ಕುರಿತ ವರದಿಗಳನ್ನೊಳಗೊಂಡ ತನ್ನ ಪ್ರತಿಯೊಂದು ಏಜನ್ಸಿಗೆ ನಿಗದಿಪಡಿಸಲಾದ ಬಜೆಟ್.

ಸಾರ್ವಜನಿಕ ಹಣದ ಖರ್ಚು ಮತ್ತು ಬಟವಾಡೆಗಳಿಗೆ ಯಾವುದೇ ಬಜೆಟ್ ಮತ್ತ ಯೋಜನೆಗಳು ಇರುವುದಿಲ್ಲ ಹಾಗು ಈ ಅನುಕೂಲವು ವಿಜಯಾ ಬ್ಯಾಂಕಿಗೆ ಅನ್ವಯವಾಗುವುದಿಲ್ಲ.

4.1 ಬಿ (xii) ಗದಿಪಡಿಸಿದ ಮೊತ್ತಗಳೂ ಸೇರಿದಂತೆ ಅನುದಾನದ ಕಾರ್ಯಕ್ರಮಗಳು ಮತ್ತು ಅಂಥವುಗಳ ಫಲಾನಭವಿಗಳ ವಿವರಗಳೂ ಸೇರಿದಂತೆ ನೆರವೇರಿಕೆಯ ವಿಧಾನ.

ತನ್ನ ಠೇವಣಿ/ಸಾಲನೀಡುವ ಪ್ರಕ್ರಿಯೆಗಳಲ್ಲಿ ಬ್ಯಾಂಕು ಯಾವುದೇ ಅನುದಾನವನ್ನು ನೀಡುತ್ತಿಲ್ಲ. ಸರ್ಕಾರದ ಯೋಜನೆಗಳ ಅನುಷ್ಟಾನದಲ್ಲಿ ಬ್ಯಾಂಕಿಗೆ ಸರ್ಕಾರ ಮತ್ತು ಸರ್ಕಾರದ ಏಜನ್ಸಿಗಳಿಂದ ಅನುದಾನ ದೊರೆಯುತ್ತದೆ ಹಾಗು ಅದನ್ನು ಅಂಥ ಸಾಲಗಳ ಫಲಾನುಭವಿಗಳಿಗೆ ಸರ್ಕಾರ ಅಥಾವ ಸರ್ಕಾರದ ಏಜನ್ಸಿಗಳ ನಿಯಮಗಳಿಗೆ ಅನುಗುಣವಾಗಿ ಬಟವಾಡೆ ಮಾಡಲಾಗುತ್ತದೆ

4.1 ಬಿ (xiii) ನಅದರಿಂದ ಮಂಜೂರಾದ ರಿಯಾಯಿತಿಗಳು, ರಹದಾರಿಗಳು ಅಥಾವ ಪ್ರಮಾಣೀಕರಣಗಳ ವಿವರಗಳು.

ಬ್ಯಾಂಕಿನಲ್ಲಿ ರಿಯಾಯಿತಿಗಳು, ರಹದಾರಿಗಳು ಅಥಾವ ಪ್ರಮಾಣೀಕರಣಗಳು ಮುಂತಾದವನ್ನು ಮಂಜೂರು ಮಾಡುವ ಯಾವುದೇ ಕಾರ್ಯಕ್ರಮಗಳಿರುವುದಿಲ್ಲ.

ವಿಷಯದ ಸಂ. ಅನುಕೂಲ ವಿವರಗಳು
4.1 ಬಿ (xiv) ವಿದ್ಯುನ್ಮಾನ ರೂಪಕ್ಕಿಳಿಸಿದ ಮಾಹಿತಿಯ ಲಭ್ಯತೆಯ ಬಗ್ಗೆ ವಿವರಗಳು.

ಠೇವಣಿಗಳು, ಮುಂಗಡಗಳು ಮತ್ತು ಬ್ಯಾಂಕು ನೀಡುವ ಇತರ ಸೌಲಭ್ಯಗಳ ಬಗೆಗಿನ ಎಲ್ಲ ಸಾಮಾನ್ಯ ಮಾಹಿತಿಯು ಬ್ಯಾಂಕಿನ ಅಂತರ್ಜಾಲ ತಾಣದಲ್ಲಿ ಈಗಾಗಲೇ ಲಭ್ಯವಿದೆ.

4.1 ಬಿ (xv) ಸಾರ್ವಜನಿಕ ಬಳಕೆಗೆ ನಿರ್ವಹಿಸಲಾಗುತ್ತಿರವ ಗ್ರಂಥಾಲಯದ ಅಥಾವ ವಾಚನಾಲಯದ ಕೆಲಸದ ಸಮಯವೂ ಸೇರಿದಂತೆ, ಮಾಹಿತಿಯನ್ನು ಪಡೆದುಕೊಳ್ಳಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು.

ಬ್ಯಾಂಕಿನ ಬಗ್ಗೆ, ಅದರ ಉತ್ಪನ್ನಗಳು/ಸೇವೆಗಳ ಬಗ್ಗೆ ವಿವರವಾದ ಮಾಹಿತಿಯು ಬ್ಯಾಂಕಿನ ಅಂತರ್ಜಾಲ ತಾಣಗಳಲ್ಲಿ ಲಭ್ಯವಿರುತ್ತದೆ. ಸಾರ್ವಜನಿಕರು ಶಾಖಾ ವ್ಯವಸ್ಥಾಪಕರನ್ನು ಭೇಟಿಯಾಗಿ ಇನ್ನೂ ಹೆಚ್ಚಿನ ಸ್ಪಷ್ಟೀಕರಣ/ಮಾರ್ಗದರ್ಶನ ಪಡೆಯಬಹುದು. ಸಾರ್ವಜನಿಕರು ಸಾರ್ವಜನಿಕ ಮಾಹಿತಿ ಅಧಿಕಾರಿ/ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ಮುಖ್ಯ ಕಚೇರಿ/ ಪ್ರಾಂತೀಯ ಕಛೇರಿಗಳ ಮಟ್ಟದಲ್ಲಿ ಭೇಟಿಯಾಗಿ ಬ್ಯಾಂಕಿನ ಅಂತರ್ಜಾಲ ತಾಣದಲ್ಲಿ ಲಭ್ಯವಿಲ್ಲದ ಮಾಹಿತಿಯನ್ನು ಪಡೆಯಬಹುದು.  

4.1 ಬಿ (xvi) ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳು

ಸಾರ್ವಜನಿಕ ಮಾಹಿತಿ ಅಧಿಕಾರಿಗಳು/ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:-

 
 
ಮುಖ್ಯ ಕಚೇರಿ ಮತ್ತು ಪ್ರಾಂತೀಯ ಕಚೇರಿಗಳಲ್ಲಿರುವ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ) ಮತ್ತು ಮೇಲ್ಮನವಿದಾರ ಅಧಿಕಾರಿಗಳ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಾರ್ಯಕಾರಿ ಅಧಿಕಾರಿಗಳ ಹೆಸರುಗಳನ್ನು ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು / ಕೇಂದ್ರೀಯ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳಾಗಿ ನಿಯುಕ್ತಿಗೊಳಿಸುವಿಕೆ
ಕ್ರ. ಸಂಖ್ಯೆ ಮುಖ್ಯ ಕಛೇರಿಯ ವಿಳಾಸ ವ್ಯಾಪ್ತಿ ಸಾರ್ವಜನಿಕ ಮಾಹಿತ ಅಧಕಾರಿ ಮತ್ತು ಪದನಾಮ, ದೂರವಾಣಿ ಸಂಖ್ಯೆ ಮತ್ತು ಇ-ಮೈಲ್ ವಿಳಾಸ ಸಹಾಯಕ ಸಾರ್ವಜನಿಕ ಮಾಹಿತಿ ಅಧಕಾರಿ ಮತ್ತು ಪದನಾಮ ಹಾಗು ದೂರವಾಣಿ ಸಂಖ್ಯೆ
      ಶ್ರೀಯುತರಾದ ಶ್ರೀಯುತರಾದ
1 ಮುಖ್ಯ ಕಛೇರಿ  
41/2, ಎಮ್.ಜಿ.ರಸ್ತೆ
ಬೆಂಗಳೂರು 
560 001      
ಮುಖ್ಯ ಕಛೇರಿ

ಶ್ರೀ ಉದಯ್ ಕುಮಾರ್ 
ಡೆಪ್ಯುಟಿ ಜನರಲ್ ವ್ಯವಸ್ಥಾಪಕರು  
(ಸಾಲ(ಆರ್ & ಆರ್) ವಿಭಾಗ )

ದೂರವಾಣಿ:   080-25590606 (ನೇರ)
:   080-25584066 ವಿಸ್ತರಣೆ. 259
ಇ-ಮೈಲ್: creditrnrdgm@vijayabank.co.in

ಶ್ರೀ ಬಿ.ಪಿ. ನಂದ,  
ಮುಖ್ಯ ವ್ಯವಸ್ಥಾಪಕರು,    
ಸಾಲದ ಕಾನೂನು ವಿಭಾಗ., 

ದೂರವಾಣಿ: 080 -25584794 (ನೇರ)
: 080-25584066.  ವಿಸ್ತರಣೆ. 256
ಇ-ಮೈಲ್: cmlegal@vijayabank.co.in

ಮೇಲ್ಮನವಿದಾರ ಅಧಿಕಾರಿ 

ಮುಖ್ಯ ಕಛೇರಿ, ಬೆಂಗಳೂರು :

ಶ್ರೀ ಜೆ.ಪಾಂಡಿಯನ್
ಸಾಮಾನ್ಯ ವ್ಯವಸ್ಥಾಪಕರು
ಸಾಲ(ಪರಿಶೀಲನೆ ಮತ್ತು ಮರುಪಾವತಿ) ವಿಭಾಗ.
ವಿಜಯಾ ಬ್ಯಾಂಕ್, 
ಮುಖ್ಯ ಕಛೇರಿ
41/2, ಎಮ್.ಜಿ.ರಸ್ತೆ
ಬೆಂಗಳೂರು - 560001

ದೂರವಾಣಿ: 080 - 25590767
ಫ್ಯಾಕ್ಸ್   :  080 - 25584434
ಇ-ಮೈಲ್: jpandiyan@vijayabank.co.in  

 

ವಿಷಯದ ಸಂ. ಅನುಕೂಲ ವಿವರಗಳು
4.1 ಬಿ (xvii) ಸೂಚಿಸಲಾಗಿರುವ ಇನ್ನಾವುದಾದರೂ ಮಾಹಿತಿ ಸಾರ್ವಜನಿಕ ಕುಂದುಕೊರತೆಯ ಪರಿಹಾರದ ವ್ಯವಸ್ಥೆಯು ನಮ್ಮ ಬ್ಯಾಂಕಿನಲ್ಲಿ ಪ್ರಸ್ತುತವಿರುವಂತೆ ವಿವರಗಳನ್ನು ಕೆಳಗೆ ನೀಡಲಾಗಿದೆ:-

  ಸಾರ್ವಜನಿಕ ಕುಂದುಕೊರತೆ ಪರಿಹಾರದ ವ್ಯವಸ್ಥೆ 

ನಮ್ಮ ಬ್ಯಾಂಕು ಉನ್ನತ ಮಟ್ಟದ ಗ್ರಾಹಕ ಸೇವೆಯನ್ನು ಮತ್ತು ಗ್ರಾಹಕರ ಕುಂದುಕೊರತೆಗಳನ್ನು ಸಕಾಲದಲ್ಲಿ ಪರಿಹರಿಸುವುದಕ್ಕೆ ಉಚ್ಚ ಆದ್ಯತೆಯನ್ನು ನೀಡಲು ಬದ್ಧವಾಗಿದೆ. ಕೇಂದ್ರೀಯ ಪರಿವೀಕ್ಷಣಾ ವಿಭಾಗಕ್ಕೆ ಸೇರಿದಂತೆಯೇ ಗ್ರಾಹಕ ಕುಂದುಕೊರತೆಗಳ ಪರಿಹಾರಕ್ಕೆಂದೇ ವಿಶೇಷವಾಗಿ ಒಂದು ವಿಭಾಗವನ್ನು ಮುಖ್ಯ ಕಚೇರಿಯಲ್ಲಿ ಸೆಪ್ಟಂಬರ್, 2002ರಲ್ಲಿ, ಗ್ರಾಹಕರಿಂದ ಬಂದ ದೂರುಗಳನ್ನು ನೋಡಿಕೊಳ್ಳಲು ಪ್ರಾರಂಭಿಸಿದ್ದೇವೆ. ಈ ವಿಭಾಗಕ್ಕೆ ಒಬ್ಬ ಸಾಮಾನ್ಯ ವ್ಯವಸ್ಥಾಪಕರು ಮುಖ್ಯಸ್ಥರಾಗಿದ್ದಾರೆ ಅವರು ಗ್ರಾಹಕ ಕುಂದು ಕೊರತೆಗಳಿಗೆ ಏಕಕೇಂದ್ರ ಅಧಿಕಾರಿಯಾಗಿರುತ್ತಾರೆ. 

ದೂರುಗಳಿಗೆ ಎಲ್ಲ ಹಂತಗಳಲ್ಲಿ ದಕ್ಷತೆಯಿಂದ, ವಿನಮ್ರತೆಯಿಂದ ಮತ್ತು ನ್ಯಾಯಯುತವಾಗಿ ಸ್ಪಂದಿಸುವುದು ನಮ್ಮ ಗುರಿಯಾಗಿರುತ್ತದೆ. ಗ್ರಾಹಕನು ದೂರವಾಣಿಯ ಮೂಲಕ, ಖುದ್ದಾಗಿ, ಅಂಚೆ ಅಥಾವ ಇ-ಮೆಯಿಲ್ ಮೂಲಕ ತಮ್ಮ ದೂರನ್ನು ಸಲ್ಲಿಸಬಹುದು. ಈ ವ್ಯವಸ್ಥೆಯ ವಿಶಿಷ್ಟ ಲಕ್ಷಣಗಳು ಹೀಗಿವೆ:

 

 •  ಶಾಖೆಯಲ್ಲಿ ಶಾಖೆಯ ಮುಖ್ಯಸ್ಥರು ಗ್ರಾಹಕರ ದೂರುಗಳಿಗೆ ವೈಯಕ್ತಿಕವಾಗಿ ಸ್ಪಂದಿಸುತ್ತಾರೆ. ಸಾಲುರಂದ್ರಗಳಿರುವ ಸಲ್ಲಿಕೆ ರಸೀತಿಯಿರುವ ಒಂದು ದೂರು ದಾಖಲಾತಿ ಪುಸ್ತಕವು ಪ್ರತಿ ಶಾಖೆಯಲ್ಲಿಯೂ ಲಭ್ಯವಿರುತ್ತದೆ ಹಾಗು ದೂರು ಪುಸ್ತಕವು ದೊರೆಯುವ ಬಗ್ಗೆಯೂ ಒಂದು ಸೂಚನಾಪಲಕವೂ ಶಾಖೆಯಲ್ಲಿ ಪ್ರದರ್ಶಿತವಾಗಿರುತ್ತದೆ. ಅವಶ್ಯವಿದ್ದರೆ ದೂರು ನೀಡಿದವರನ್ನೇ ಖುದ್ದಾಗಿ ಸಂಪರ್ಕಿಸಿಯಾದರೂ, 7 ದಿನಗಳ ಅವಧಿಯೊಳಗೆ ಕುಂದುಕೊರತೆಯನ್ನು ಪರಿಹರಿಸಲು ಎಲ್ಲ ಪ್ರಯತ್ನವನ್ನೂ ಮಾಡಲಾಗುತ್ತದೆ, ಶಾಖೆಯ ವ್ಯವಸ್ಥಾಪಕರು ತಮ್ಮ ಮಟ್ಟದಲ್ಲಿ ಕುಂದುಕೊರತೆಯನ್ನು ನೀಗಿಸಿ ಪರಿಹಾರ ನೀಡಲು ಸಾಧ್ಯವಾಗದಿದ್ದರೆ, ಅವರು ನಿಯಂತ್ರಣಾಧಿಕಾರಿಗಳ ಸಲಹೆಯನ್ನು ತೆಗೆದುಕೊಳ್ಳುತ್ತಾರೆ ಹಾಗು ಅವಶ್ಯವಿದ್ದರೆ ದೂರು ನೀಡಿದವರು ಮತ್ತು ಪ್ರಾಂತೀಯ ಮುಖ್ಯಸ್ಥರ ನಡುವೆ, ವಿಷಯವನ್ನು ಬಗೆಹರಿಸಿಕೊಳ್ಳಲು ಒಂದು ಭೇಟಿಯನ್ನು ಯೋಜಿಸಬಹದು. ಹಾಗಿದ್ದೂ, ವಿಷಯವು ಬಗೆಹರಿಯದಿದ್ದರೆ ಉಪ ಸಾಮಾನ್ಯ ವ್ಯವಸ್ಥಾಪಕರು/ ಸಾಮಾನ್ಯ ವ್ಯವಸ್ಥಾಪಕರ ಮೂಲಕ ಮುಖ್ಯ ಕಛೇರಿಯು ಮಧ್ಯಪ್ರವೇಶಿಸುತ್ತದೆ. ಅವರು ಅವಶ್ಯವಿದ್ದರೆ ಶಾಖೆಗೆ ಅಥಾವ ದೂರುದಾರರಲ್ಲಿಗೆ ಬಂದು ವಿಷಯವನ್ನು ಬಗೆಹರಿಸಲು ಕ್ರಮಗಳನ್ನು ಕೈಗೊಳ್ಳುತ್ತಾರೆ.
 • ಒಂದು ದೂರು ಪ್ರಾಂತೀಯ ಕಛೇರಿಯಲ್ಲಿ ಸ್ವೀಕಾರವಾದಾಗ, ಪ್ರಾಂತೀಯ ಮುಖ್ಯಸ್ಥರು ಶಾಖೆಯನ್ನು ಖದ್ದಾಗಿ ಸಂಪರ್ಕಿಸುವ ಮೂಲಕ ಅಥವ ಪತ್ರ ವ್ಯವಹಾರದ ಮೂಲಕ ಹಾಗೂ ಅವಶ್ಯವಿದ್ದರೆ ದೂರುದಾರರಲ್ಲಿಗೆ ಖುದ್ದಾಗಿ ಭೇಟಿ ನೀಡಿ ವಿಷಯವನ್ನು ಪರಿಹರಿಸಲು/ಕುಂದುಕೊರತೆಗೆ ಪರಿಹಾರ ನೀಡುತ್ತಾರೆ. ಅಕಸ್ಮಾತ್ ದೂರು ತೀರ್ಮಾನವಾಗದಿದ್ದರೆ, ಮುಖ್ಯ ಕಛೇರಿಯು ದೂರನ್ನು ಕೈಗೆತ್ತಿಕೊಂಡು ವಿಷಯವನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ತಕ್ಷಣ ಕ್ರಮ ತೆಗೆದುಕೊಳ್ಳುತ್ತಾರೆ.
 • ಸಂಬಂಧಿಸಿದ ಪ್ರಾಂತೀಯ ಮುಖ್ಯಸ್ಥರ ಮತ್ತು ಮುಖ್ಯ ಕಛೇರಿಯ ಮಟ್ಟದಲ್ಲಿ ಗ್ರಾಹಕ ಕುಂದುಕೊರತೆ/ದೂರುಗಳ ಏಕಕೇಂದ್ರ ಅಧಿಕಾರಿಯ ಹೆಸರು, ಪದನಾಮ, ವಿಳಾಸ, ದೂರವಾಣಿ/ಫ್ಯಾಕ್ಸ್ ಸಂಖ್ಯೆಗಳನ್ನು ಎದ್ದುಕಾಣುವಂತೆ ಎಲ್ಲ ಶಾಖೆಗಳಲ್ಲಿಯೂ ಪ್ರದರ್ಶಿಸಲಾಗಿರತ್ತದೆ.
 • “ಸಾರ್ವಜನಿಕ ಸನ್ನದು”ವಿನಲ್ಲಿ ಒಂದು ಅಧ್ಯಾಯವನ್ನು ದೂರುಗಳ ಪರಿಹಾರವನ್ನು ವಿವರಿಸುವುದಕ್ಕೆ ಮೀಸಲಿರಿಸಲಾಗದೆ. ಅದರಲ್ಲಿ ಸಾಮಾನ್ಯ ಸಾರ್ವಜನಿಕರಿಗೆ ಯಾವ ಕಛೇರಿಯನ್ನು ಸಂಪರ್ಕಿಸಬೇಕು ಮತ್ತು ಕುಂದುಕೊರತೆಗಳ ಶೀಘ್ರ ಪರಿಹಾರಕ್ಕೆ ದಾರಿಗಳು ಮತ್ತು ವಿವರಣಾತ್ಮಕವಾದ ಮಾರ್ಗದರ್ಶಿ ಸೂತ್ರಗಳು ಲಭ್ಯವಿರುತ್ತವೆ. ಬ್ಯಾಂಕಿನ ಅಂತರ್ಜಾಲ ತಾಣದಲ್ಲಿ ಬ್ಯಾಂಕಿನ ವಿವಿಧ ಚಟುವಟಿಕೆಗಳ ವಿವರಗಳು ಲಭ್ಯವಿರುತ್ತವೆ: ಅವುಗಳೆಂದರೆ: ವ್ಯವಸ್ಥಾಪನೆ, ಹಣಕಾಸು, ಶಾಖೆಯ ಜಾಲ, ಎಟಿಎಮ್ ಕೇಂದ್ರಗಳು, ಎನ್.ಆರ್.ಐ. ಶಾಖೆಗಳು, ಸಾಮಾನ್ಯ ಸಾರ್ವಜನಿಕರು ತಮ್ಮ ಬಳಕೆಗ ಡೌನ್ ಲೋಡ್ ಮಾಡಿಕೊಳ್ಳಬಹುದಾದ ಸೂಕ್ತ ಅರ್ಜಿಗಳೊಂದಿಗೆ ಲಭ್ಯವಿರುವ ವಿವಿಧ ರೀತಿಯ ಸೇವೆಗಳು, ಅಂತರ್ಜಾಲ ತಾಣದಲ್ಲಿನ ಲಭ್ಯ ಮಾಹಿತಿಯನ್ನು ನಿಯತವಾಗಿ ಪರಿಷ್ಕರಿಸಲಾಗುತ್ತದೆ.
 • ಸಾರ್ವಜನಿಕ ಕುಂದುಕೊರತೆಗಳನ್ನು ನೋಡಿಕೊಳ್ಳುವ ಏಕಕೇಂದ್ರ ಅಧಿಕಾರಿಯ ಹೆಸರು, ವಿಳಾಸ ಮತ್ತು ಕಛೇರಿ ಮತ್ತು ಮನೆಯ ದೂರವಾಣಿ ಸಂಖ್ಯೆಗಳನ್ನು ಬ್ಯಾಂಕಿನ ಅಂತರ್ಜಾಲ ತಾಣದಲ್ಲಿ ನೀಡಲಾಗಿದೆ. ಪರಿಣಾಮಕಾರಿ ಸಾರ್ವಜನಿಕ ಕುಂದುಕೊರತೆಯ ನಿವಾರಣೆಯ ವ್ಯವಸ್ಥೆಯ ಬಗ್ಗೆ ನಾವು ಎಚ್ಚರದಿಂದಿದ್ದೇವೆ ಹಾಗೂ ಆ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ನಿರಂತರವಾಗಿ ಉತ್ತಮಗೊಳಿಸಿ ದೂರುಗಳ ಸಂಖ್ಯೆ ಹಾಗು ಪರಿಹಾರ ನೀಡುವ ಸಮಯಗಳೆರಡನ್ನೂ ಕಡಿಮೆ ಮಾಡುವುದು ನಮ್ಮ ಪ್ರಯತ್ನವಾಗಿದೆ.  

 

ಪ್ರದರ್ಶನ
 vnet
ಬ್ಯಾಂಕಿಂಗ್
 ಖಾತೆ
ತೆರೆಯುವ
 ಭದ್ರತೆಗಳಿಗೆ ಪ್ರತಿಯಾಗಿ
ಸಾಲಗಳು

ಎಂಎಸ್ಎಂಇ